ಕಾರ್ಕಳ : ಹೋಂನರ್ಸ್ ಸೇವೆಗೆ ಬಂದಿದ್ದ ಯುವಕನೋರ್ವ ಮನೆಯ ಯಜಮಾನರ ಗೂಗಲ್ ಪೇ ಪಿನ್ ಕದ್ದು 9.80 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಶೆಟ್ಟಿ ಆರೋಪಿ.
ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಶಶಿಧರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಯಜಮಾನರು ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಗೂಗಲ್ ಪೇ ಪಿನ್ ನಂಬರ್ ಅನ್ನು ಗಮನಿಸಿದ್ದ.
ಈ ಪಿನ್ ಅನ್ನು ಬಳಸಿ ಕಾರ್ತಿಕ್, ಶಶಿಧರ್ ಅವರ ಖಾತೆಯಿಂದ 9.80 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಗೂಗಲ್ ಪೇ ಮುಖಾಂತರವೇ ವರ್ಗಾವಣೆ ಮಾಡಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.