ಮನೆಗೆ ನುಗ್ಗಿ ನಗ- ನಗದು ಕಳವು

ಬಂಟ್ವಾಳ : ಮನೆಗೆ ನುಗ್ಗಿ ನಗ- ನಗದು ಕಳವು ಮಾಡಿರುವ ಘಟನೆ ಮಾಣಿ ಗ್ರಾಮದ ಮಾಣಿಪಳಿಕೆ ಜಯರಾಜ್ ಅವರ ಮನೆಯಲ್ಲಿ ನಡೆದಿದೆ.

ಮನೆಯನ್ನು ಬೆಳಿಗ್ಗೆ ಜಯರಾಜ್ ಅವರ ತಮ್ಮ ಸುಜಯ್‌ ಭದ್ರಪಡಿಸಿ ಹೋಗಿದ್ದರು. ಜಯರಾಜ್ ಮಧ್ಯಾಹ್ನ ಮನೆಗೆ ಬಂದಾಗ, ಮನೆಯ ಹಿಂಬಾಗಿಲನ್ನು ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಕಪಾಟನ್ನು ತೆರೆದು ಲಾಕರನ್ನು ಮುರಿದು, 12 ಗ್ರಾಂ ತೂಕದ (ಅಂದಾಜು ಮೌಲ್ಯ 78000/-) ಚಿನ್ನದ ಚೈನ್‌ ಮತ್ತು ಜಯರಾಜ್ ಅವರ ತಾಯಿಯ ಒಟ್ಟು 4 ಗ್ರಾಂ ತೂಕದ ಕಿವಿಯ ಆಭರಣ (ಅಂದಾಜು ಅಂದಾಜು ಮೌಲ್ಯ ಸುಮಾರು 26,000/- ರೂ.) ಹಾಗೂ ಪಾಸ್‌ ಪೋರ್ಟ್‌ ಹಾಗೂ 15000/- ನಗದನ್ನು ಕಳವು ಮಾಡಿದ್ದಾರೆ.

ಜಯರಾಜ್ ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ