ಅಂಕೋಲಾ ಶಿರೂರು ಬಳಿ ಗುಡ್ಡ ಕುಸಿತ ಹಿನ್ನೆಲೆ ಹೆದ್ದಾರಿ ಬಂದ್..! ಸಹಾಯದ ನಿರೀಕ್ಷೆಯಲ್ಲಿ ಟ್ರಕ್ ಚಾಲಕರು…

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣವಾಗಿ ಬಂದ್ ಆಗಿದೆ. ಮಂಗಳೂರಿನಿಂದ ಧಾರವಾಡಕ್ಕೆ ತೆರಳಬೇಕಾದ ಟ್ಯಾಂಕರ್ ಟ್ರಕ್‌ಗಳು ಶಿರೂರು ಐ‌ಆರ್‌ಬಿ ಟೋಲ್ ಗೇಟ್ ಬಳಿ ನಿಂತಿವೆ. ಎಲ್‌ಪಿ‌ಜಿ ಗ್ಯಾಸ್ ತುಂಬಿಸಿಕೊಂಡು ಅಂಕೋಲ ಮಾರ್ಗವಾಗಿ ಧಾರವಾಡ ತಲುಪಬೇಕಾಗಿರುವ 120ಕ್ಕೂ ಹೆಚ್ಚು ಟ್ರಕ್ ಗಳು ಶಿರೂರು ಟೋಲ್ ಗೇಟ್‌ನಲ್ಲಿ ಮೂರು ನಾಲ್ಕು ದಿನಗಳಿಂದ ಕಾಯುತ್ತಿವೆ.

ಕಳೆದ ಮೂರು ದಿನಗಳಿಂದ ಇಲ್ಲಿಯೇ ಕಾಯುತ್ತಿರುವ ಟ್ರಕ್ ಚಾಲಕರು ತಮ್ಮ ಟ್ರಕ್‌ಗಳಲ್ಲಿ ಇರುವ ರೇಷನ್ ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಶೌಚ ಮತ್ತು ಸ್ನಾನಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಟ್ರಕ್ ಚಾಲಕರು ಕೇವಲ ಎರಡು ದಿನಗಳಿಗೆ ಸಾಕಾಗುವಷ್ಟು ರೇಷನ್ ಕೊಂಡು ತಂದಿದ್ದಾರೆ.

ರೇಷನ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಟ್ರಕ್ ಚಾಲಕರು, ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ