ಇಲ್ಲಿ ಹೆಣ ಸಾಗಿಸಲು ಹೆಣಗಾಟ – ಸಂಪರ್ಕ ರಸ್ತೆಯಿಲ್ಲದೆ ಪರದಾಟ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಂಚಿನಡ್ಕ – ಕಾಜಲ ಎಂಬಲ್ಲಿ ಸರಿಯಾದ ಸಂಪರ್ಕ ರಸ್ತೆಯ ವ್ಯವಸ್ಥೆಯಿಲ್ಲದೆ ಸ್ಥಳೀಯರು ಹೆಣ ಸಾಗಿಸಲು ಹೆಣಗಾಟ ನಡೆಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ದ.ಕ.ಜಿಲ್ಲೆಯ ಬೆಂಚಿನಡ್ಕ – ಕಾಜಲವು ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಗಡಿಭಾಗ. ಇಲ್ಲಿ ಹರಿಯುತ್ತಿರುವ ಹೊಳೆಗೆ ಸೇತುವೆ ಇಲ್ಲ. ಪರಿಣಾಮ ಇಲ್ಲಿನ ನಿವಾಸಿಗಳು ಹೊಳೆಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟನ್ನೇ ಸಂಪರ್ಕ ರಸ್ತೆಯನ್ನಾಗಿ ಮಾಡಿದ್ದಾರೆ. ಇದೀಗ ಸ್ಥಳೀಯರು ಕಿಂಡಿ ಅಣೆಕಟ್ಟಿನ ಕಿರುದಾರಿಯಲ್ಲಿ ಮೃತಪಟ್ಟ ವೃದ್ಧೆಯೋರ್ವರ ಮೃತದೇಹವನ್ನು ಸಾಗಿಸಲು ಹೆಣಗಾಟ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಇಲ್ಲೊಂದು ಸೇತುವೆ ನಿರ್ಮಾಣಕ್ಕಾಗಿ, ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಈ ರೀತಿಯಲ್ಲಿ ಕಷ್ಟಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ