ಹೆಜಮಾಡಿಯ ಟೋಲ್ ಗೇಟ್‌ ಸಿಬ್ಬಂದಿಗೆ ಹಲ್ಲೆ

ಪಡುಬಿದ್ರಿ : ಹೆಜಮಾಡಿಯ ಒಳ ರಸ್ತೆಯ ಕಿರು ಟೋಲ್ ಗೇಟ್‌ನಲ್ಲಿ ಯುವಕನೊಬ್ಬ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಕೆಂಪು ಬಣ್ಣದ ಕಾರು ಟೋಲ್ ನಿಯಮ ಉಲ್ಲಂಘಿಸಿ ಗೇಟ್ ದಾಟಿ ಮುಂದೆ ಹೋಗಿದ್ದು ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಉಢಾಪೆಯಾಗಿ ವರ್ತಿಸಿದ ಕಾರು ಚಾಲಕ ಡಿಕ್ಕಿಯಾಗುವಂತೆ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಮತ್ತೆ ಕಾರು ನಿಲ್ಲಿಸಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆ ಸಂದರ್ಭ ಮಹಿಳಾ ಸಿಬ್ಬಂದಿಗಳು ಸಹಿತ ಸ್ಥಳೀಯರು ಹಲ್ಲೆಗೊಳಗಾದ ಸಿಬ್ಬಂದಿಯ ನೆರವಿಗೆ ಬರುತ್ತಿದಂತೆ ಕಾರನ್ನೇರಿ ಪಲಾಯನ ಮಾಡಿದ್ದಾನೆ.

ಘಟನೆ ನಡೆದ ಕೆಲವೇ ಹೊತ್ತಲ್ಲಿ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾರು ಸಂಚರಿಸಿದ ಜಾಡು ಹಿಡಿದು ಹೊರಟ ಪಡುಬಿದ್ರಿ ಪೊಲೀಸರು ಕೆಲವೇ ಹೊತ್ತಲ್ಲಿ ಕಾರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ