ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳೆ; ನೀರಿನಲ್ಲಿ ತೇಲಿಹೋದ ಕಾರು

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿಯ ಸಮೀಪ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವಾರು ಸಮಸ್ಯೆಗಳು ಉಂಟಾಗಿವೆ. ಆಗುಂಬೆ ಘಾಟ್‌ ಸಮೀಪದಲ್ಲಿ ತೀವ್ರ ಮಳೆ ಬೀರುವ ಮೂಲಕ, ಹೆಬ್ರಿಯ ಸಮೀಪದ ನದಿ ತೊರೆಗಳು ತುಂಬಿ ಹರಿಯುತ್ತಿವೆ.

ಮಳೆ ನೀರು ತೋಟ ಮತ್ತು ಗದ್ದೆಗಳಿಗೆ ಏಕಾಯೇಕಿ ನುಗ್ಗಿದ್ದು, ಈ ಹಿನ್ನೆಲೆಯಲ್ಲಿ, ತೋಟದಲ್ಲಿ ನಿಲ್ಲಿಸಿದ್ದ ಕಾರು ನೀರಿನಲ್ಲಿ ತೇಲಿಹೋದ ಘಟನೆ ಸಂಭವಿಸಿದೆ. ಮುದ್ರಾಡಿಯ ತಗ್ಗು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು, ರಬ್ಬರ್ ಅಡಿಕೆ ತೋಟದ ಮಧ್ಯೆ ಸಿಲುಕಿಕೊಂಡಿವೆ.

ಕಬ್ಬಿನಾಲೆ ಬೆಟ್ಟದ ಪರಿಸರದಲ್ಲಿ ವಿಪರೀತ ಮಳೆ ಸುರಿದ ಘಟನೆ, ಮಧ್ಯಾಹ್ನ 2:30 ರಿಂದ 4 ಗಂಟೆಯವರೆಗೆ ಸಂಭವಿಸಿದೆ. ಈ ಮಳೆಯ ಕಾರಣದಿಂದಾಗಿ, ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಕೆಲವೆಡೆ ಜಲಾಮಯಗೊಂಡವು.

ಕಾಂತಾರಬೈಲು 4, ಹೊಸಕಂಬಳ 1, ಮತ್ತು ಕೆಳಕಿಲದಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು, ಗುಡುಗು ಮತ್ತು ಮಿಂಚು ಸಹಿತ ಮಳೆಗೆ, ಎರಡು ಕಾರುಗಳು ಮತ್ತು ಬೈಕುಗಳಿಗೆ ಹಾನಿಯಾಗಿದೆ.

ಸಂಜೆ ನಂತರ ಮಳೆ ಇಳಿಮುಖವಾಗಿದ್ದು, ನದಿ ತೊರೆಯಲ್ಲಿ ಹೆಚ್ಚಿದ್ದ ನೀರಿನ ಮಟ್ಟವು ಇಳಿಮುಖವಾಗುತ್ತಿದೆ. ನೀರಿನ ಪ್ರಮಾಣ ಇನ್ನೂ ಕಡಿಮೆ ಆಗುವ ನಿರೀಕ್ಷೆಯಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !