ಸ್ಕೂಟಿಯಲ್ಲಿ ಬರುವಾಗ ಹೃದಯಾಘಾತ; ಪೈಂಟರ್ ಮೃತ್ಯು…!

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿ ನಿವಾಸಿ ಸುಹೇಬ್‌ ಹೃದಯಾಘಾತದಿಂದ ಡಿ. 8ರಂದು ನಿಧನ ಹೊಂದಿದರು.

ಸುಹೇಬ್‌ ಜರಿಗುಡ್ಡೆಯಲ್ಲಿ ಗ್ಯಾರೇಜ್‌ ಒಂದರಲ್ಲಿ ಕಾರು ಪೈಂಟರ್‌ ಆಗಿ ಕೆಲಸ ಮಾಡುತ್ತಿದ್ದರು. ಇವರು ಮಲ್ಪೆಯಿಂದ ಕಾರ್ಕಳಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಹಿರಿಯಡ್ಕದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಸ್ಕೂಟಿ ನಿಲ್ಲಿಸಿದವರು ಕುಸಿದು ಬಿದ್ದಿರುತ್ತಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದರೂ ಆದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿರುತ್ತಾರೆ.

ಮೃತರು ಪತ್ನಿ, 2 ವರ್ಷದ ಮಗು, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ