ಯುವ ಸಂಗಮ (ರಿ.) ಕೌಡೂರು ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ಯುವ ಸಂಗಮ(ರಿ.) ಕೌಡೂರು ಇವರ ಆಶ್ರಯದಲ್ಲಿ ಕಾರ್ಕಳ ತಾಲ್ಲೂಕಿನಲ್ಲಿಯೇ ವಿನೂತನ ಕಾರ್ಯಕ್ರಮ ಹೃದಯ ತಪಾಸಣೆ (ಇ‌ಸಿ‌‌ಜಿ‌), ಆರೋಗ್ಯ ತಪಾಸಣೆ, ಹೃದಯಾಘಾತದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಜಯದೇವ ಆಸ್ಪತ್ರೆ ಬೆಂಗಳೂರು, ಮಿತ್ರ ಆಸ್ಪತ್ರೆ ಉಡುಪಿ, ಹೈಟೆಕ್ ಆಸ್ಪತ್ರೆ ಉಡುಪಿ ಇಲ್ಲಿಯ ತಜ್ಞ ವೈದ್ಯರಾದ ಡಾ. ಅನೂಪ್ ಕೆ ಶೆಟ್ಟಿಯವರು ಉದ್ಘಾಟಿಸಿ ಹೃದಯಾಘಾತ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಪಾಲರಾದ ಡಾ| ಮಂಜುನಾಥ್ ಎ ಕೋಟ್ಯಾನ್‌ರವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅರೋಗ್ಯ ತಪಾಸಣೆಯನ್ನು ಉಡುಪಿಯ ಖ್ಯಾತ ವೈದ್ಯರಾದ ಡಾ. ಪ್ರಭಾಕರ್ ಮಲ್ಯ, ಉದ್ಯಾವರ SDM ಆಸ್ಪತ್ರೆಯ ವೈದ್ಯೆ ಡಾ. ಅನ್ಲಾ ಕೆ ಶೆಟ್ಟಿ, ಬೈಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ. ಮಹಾಂತ್ ಹೆಗ್ಡೆಯವರು ನಡೆಸಿಕೊಟ್ಟರು.

ಉಡುಪಿಯ ನ್ಯೂ ನೇಶನಲ್ ಡಯಾಗ್ನೋಸ್ಟಿಕ್ ಸೆಂಟರ್‌ನ ಪೂರ್ಣ ಕಾಮತ್ ಅವರ ತಂಡದಿಂದ ಸಾರ್ವಜನಿಕರಿಗೆ ECG, ಮಧುಮೇಹ ಪರೀಕ್ಷೆ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರಾರಾದ ಕೆ ಸುಧೀರ್ ಹೆಗ್ಡೆ ಹಾಗೂ ಪಧಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು