ಪ್ರತಿಭಟನಾ ಸಭೆಯಲ್ಲಿ ದ್ವೇಷ ಭಾಷಣ – ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪೊಲೀಸರಿಂದ ಸುಮೊಟೋ ಕೇಸ್

ಉಡುಪಿ : ಮಲ್ಪೆ ಬಂದರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರಿಗೆ ಅಪರಾಧ ಮಾಡಿಸಲು ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ ಭಾಷಣ ಮಾಡಿ ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿದ್ದು ಈ ಸಂಬಂಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, “ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ? ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಟ್ಟಿ ಹಾಕಲೇಬೇಕು. ಕಳ್ಳರನ್ನು ಕಟ್ಟಿ ಹಾಕಲೇ ಬೇಕು, ಮತ್ತೇನು ಮಾಡಲಿಕ್ಕೆ ಆಗುತ್ತೆ? ಏನು ಅವರಿಗೆ ಏಟು ಎಂದರೆ ಮಚ್ಚಿನಲ್ಲಿ ಖಡ್ಗದಲ್ಲಿ ತಲವಾರಿನಲ್ಲಿ ಹೊಡೆದದ್ದಾ? 2 ಕೆನ್ನೆಗೆ ಬಾರಿಸಿದ್ದು, ಯಾರಿಗೆ? ಕಳ್ಳಿ ಅಂತ ಆರೋಪಿತ ಒಂದು ವ್ಯಕ್ತಿಗೆ, ಆ ಮಹಿಳೆಯದ್ದು ಏನಾದರೂ ಆಕ್ಷೇಪ ಉಂಟಾ?” ಎಂದು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಹೊಡೆದುದ್ದನ್ನು ಸಮರ್ಥನೆ ಮಾಡಿಕೊಂಡಿದ್ದರು.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025 ಕಲಂ ಕಲಂ 57, 191(1), 192. BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಉಳ್ಳಾಲದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯ ಉದ್ಘಾಟನೆ – ಆಶಾ ಕಾರ್ಯಕರ್ತರಿಗಾಗಿ ಕಾರ್ಯಾಗಾರ