ಅನ್ಯಕೋಮಿನ ಯುವಕನಿಂದ ವಿವಾಹಿತ ಮಹಿಳೆಗೆ ಕಿರುಕುಳ : ಪ್ರಕರಣ ದಾಖಲು

ಬಂಟ್ವಾಳ : ಅನ್ಯಕೋಮಿನ ಯುವಕನೋರ್ವ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಂಗಳದಲ್ಲಿ ನಡೆದಿದೆ.

ಅನ್ಯ ಕೋಮಿನ ಯುವಕನೋರ್ವ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ನನಗೆ ನೀನು ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂಬುವುದಾಗಿ ಹೇಳಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರನ್ನು ನೀಡಿದ್ದಾಳೆ.

ಆರೋಪಿಯನ್ನು ಕರಿಯಂಗಳ ನಿವಾಸಿ ಉಸ್ಮಾನ್ ಎಂಬಾತನ ಮಗ ತಸ್ಸೀಫ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೂ ಕೂಡ ಕಿಟಕಿಯಲ್ಲಿ ಇಣುಕಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿವಾಹಿತ ಮಹಿಳೆಯೊಬ್ಬರು ತನ್ನ ಪುತ್ರಿಯನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಎದೆಯ ಭಾಗಕ್ಕೆ ಕೈ ಹಾಕಿ ನೀನು ಸಿಗದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು