ಹನುಮಂತ ನಗರ ಶಾಲೆ ಎಲ್ ಕೆ ಜಿ ವಿಭಾಗ ಪ್ರಾರಂಭೋತ್ಸವ

ಉಡುಪಿ : ಕೇಂದ್ರ ಸರಕಾರದ ಪಿ ಎಂ ಶ್ರೀ ಯೋಜನೆಯಡಿ ಮಂಜೂರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತ ನಗರ, ನಿಟ್ಟೂರು ಇದರ ಆಂಗ್ಲ ಮಾಧ್ಯಮ ವಿಭಾಗದ ಎಲ್. ಕೆ. ಜಿ. ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ‌ರವರು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್‌ಪಾಲ್ ಸುವರ್ಣ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಹಾಗೂ ನಗರ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಇತರ ಶಾಲೆಗಳಿಗೂ ವಿಸ್ತರಿಸುವ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ನಗರ ಸಭಾ ಸದಸ್ಯರಾದ ಶ್ರೀ ಸಂತೋಷ್ ಜತ್ತನ್, ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಯುವರಾಜ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ಶಾಲಾಭಿಮಾನಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ