ಶ್ರೀಮತಿ ಉಷಾಗೆ ಪಿಹೆಚ್‌ಡಿ ಪದವಿ

ಉಡುಪಿ : ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಉಷಾ ಇವರಿಗೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್‌ಸ್ರ್ಟೀಟ್, ಮಂಗಳೂರು, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಾಲ್ಟರ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್ ಆಫ್ ಜಿಎಸ್‌ಟಿ(ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್) ಆನ್ ಎಂಎಸ್‌ಎಂಇ ಸೆಕ್ಟರ್ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು.

ಶ್ರೀಮತಿ ಉಷಾ ಇವರು ಶ್ರೀ ರಾಮಪೂಜಾರಿ, ಶ್ರೀಮತಿ ಸುಮತಿ ಇವರ ಪುತ್ರಿ ಹಾಗೂ ಶ್ರೀ ಮಹೇಶ್ ಸುವರ್ಣ ಪುತ್ತೂರು ಇವರ ಪತ್ನಿ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ