ಅರ್ಧ ಗಂಟೆಯ ಗೂಳಿಕಾಳಗ – ಬೆಚ್ಚಿ ಬಿದ್ದ ಜನ, ರೋಮಾಂಚನ…

ಗಂಗೊಳ್ಳಿ : ಮದವೇರಿದ ಎರಡು ಗೂಳಿಗಳ ಕಾಳಗ ಗ್ರಾಮಸ್ಥರನ್ನು ಬೆಚ್ಚಿ ಬೆಳಿಸುವಂತೆ ಮಾಡಿತು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ, ಈ ಘಟನೆ ನಡೆದಿದ್ದು, ಕೆಲ ಕಾಲ ಜನರು ಆತಂಕಗೊಂಡರು. ಎರಡು ಗೂಳಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಡಿಕೊಂಡ ಪರಿಣಾಮ ಗಂಗೊಳ್ಳಿಯ ಮ್ಯಾಂಗನೀಸ್‌ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾದರು. ಈ ಗೂಳಿ ಕಾಳಗ ನೋಡುತ್ತಾ ಜನರು ರಸ್ತೆ ಬದಿಯಲ್ಲಿ ನಿಲ್ಲುವಂತಾಯಿತು.

ಬಳಿಕ ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿ, ಪಟಾಕಿ ಸಿಡಿಸಿ ಗೂಳಿ ಕಾಳಗವನ್ನು ತಪ್ಪಿಸಲು ಸ್ಥಳೀಯರು ಹರಸಾಹಸಪಟ್ಟರು.
ಇಷ್ಟಾದರೂ ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಯಿತು. ಬಳಿಕ ಮತ್ತೊಂದು ಗೂಳಿ ಶಾಂತವಾಯಿತು.

Related posts

₹ 5 ಲಕ್ಷ ವೆಚ್ಚದಲ್ಲಿ ನವೀಕೃತ ಅಂಬಾಗಿಲು ಮೀನು ಮಾರುಕಟ್ಟೆ ಉದ್ಘಾಟನೆ

ಮಲ್ಪೆಯಲ್ಲಿ ನವಜಾತ ಶಿಶು ಶವಪತ್ತೆ ಪ್ರಕರಣ; ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಹಿತಿ

ಸಾಮಾಜಿಕ ಸಮಾನತೆ ಮತ್ತು ಸಹಬಾಳ್ವೆ ಅಂಬೇಡ್ಕರ್‌ರವರ ಆಶಯವಾಗಿತ್ತು : ಜಯನ್ ಮಲ್ಪೆ