ದಿನಸಿ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ನಷ್ಟ; ದ್ವೇಷದ ಕಿಡಿ ಶಂಕೆ : ಪ್ರಕರಣ ದಾಖಲು…!

ಕುಂದಾಪುರ : ಕುಂದಾಪುರ ತಾಲೂಕಿನ ಜಪ್ತಿಯ ರಸ್ತೆ ಬದಿಯಲ್ಲಿದ್ದ ತಗಡು ಶೀಟಿನ ಸಣ್ಣ ದಿನಸಿ ಅಂಗಡಿಗೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟವಾದ ಘಟನೆ ಸಂಭವಿಸಿದೆ.

ಅಂಬಿಕಾ ಮತ್ತು ಅವರ ಪತಿ ನಡೆಸುತ್ತಿದ್ದ ದಿನಸಿ ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್‌ ಡ್ರಿಂಕ್ಸ್‌, ತರಕಾರಿ ಇನ್ನಿತರ ಸೊತ್ತುಗಳಿದ್ದವು. ಅಂಗಡಿ ಮಾಲೀಕರು ರಾತ್ರಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದಿದ್ದು ತಕ್ಷಣ ಸ್ಥಳೀಯ ವ್ಯಕ್ತಿ ಅಂಗಡಿ ಮಾಲೀಕರಿಗೆ ಫೋನ್‌ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರು, ಆದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ.

ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ. ಫ್ರಿಜ್‌, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ ಎಂದು ತಿಳಿದು ಬಂದಿದೆ.

ಇದೇ ಅಂಗಡಿಯ ಸಮೀಪ ಸಂದೇಶ ಅವರು 3 ವರ್ಷದ ಹಿಂದೆ ತಗಡಿನ ಅಂಗಡಿ ಇಟ್ಟಿದ್ದು, ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಡಲು ಎಷ್ಟು ಧೈರ್ಯ ಎಂದು ಅಂಬಿಕಾ ದಂಪತಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿ ಅಂಗಡಿಗೆ ಬೆಂಕಿ ಬಿದ್ದ ಸಂದರ್ಭ ಸಂದೇಶ ಮತ್ತು ಶಿವಪ್ರಸಾದ ಎನ್ನುವವರು ಅಂಗಡಿಯ ಬಳಿ ತಿರುಗಾಡಿಕೊಂಡಿದ್ದರು. ಬೆಂಕಿ ನಂದಿಸಿ ಹೋಗುವಾಗ ಅಂಗಡಿ ಬಾಗಿಲು ತೆಗೆದು ಕೋಲ್ಡ್‌ ಕೊಡುವಂತೆ ತಮಾಷೆ ಮಾಡಿದ್ದರು. ಅಂಗಡಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಅವರ ವ್ಯಂಗದ ನಡೆಯಿಂದಾಗಿ ಅವರೇ ಬೆಂಕಿ ಹಾಕಿರಬಹುದು ಎಂದು ಶಂಕೆ ಇರುವುದಾಗಿ ಅಂಗಡಿಯ ಮಾಲಕರು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !