ಡೆಂಗ್ಯೂ ಚಿಕಿತ್ಸೆಯ ಸಂಪೂರ್ಣ ಹೊಣೆ ಸರ್ಕಾರ ಹೊರಬೇಕು : ಆರ್. ಅಶೋಕ್

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಸರ್ಕಾರ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ಟೆಸ್ಟಿಂಗ್ ನಿಂದ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಜನರ ಪ್ರಾಣದ ರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿ. ಎಲ್ಲ ಆಸ್ಪತ್ರೆಯಲ್ಲೂ ಕೊರೊನಾ ಮಾದರಿಯಲ್ಲಿ ಡೆಂಗ್ಯೂಗಾಗಿ ಬೆಡ್‌ಗಳ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರವನ್ನ ಎಚ್ಚರಿಸುವ ಕೆಲಸ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೇನೆ. ಈ ಸರ್ಕಾರವನ್ನ ಎಚ್ಚರಿಸದೇ ಹೋದರೆ ಯಾವ ಕೆಲಸವನ್ನೂ ಮಾಡೋದಿಲ್ಲ. ನಾಳೆಯಿಂದ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನಿಗಾವಹಿಲಿದ್ದಾರೆ ಎಂದು ತಿಳಿಸಿದ್ದಾರೆ.

ಡೆಂಗ್ಯೂ ಪರೀಕ್ಷೆಯನ್ನ ಉಚಿತವಾಗಿ ಮಾಡುವಂತೆ ಆದೇಶ ಮಾಡಿ. ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರುವುದರಿಂದ ಡೆಂಗ್ಯೂ ಹೆಚ್ಚಾಗುತ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಹೇಗೆ ಕೊರೊನಾ ಟೆಸ್ಟ್ ಉಚಿತ ಮಾಡಿದ್ವಿ. ಆ ರೀತಿ ಡೆಂಗ್ಯೂಗೆ ಟೆಸ್ಟಿಂಗ್ ಮಾಡಿಸಿ. ಅದಕ್ಕೂ ಆಮೇಲೆ ಟ್ಯಾಕ್ಸ್ ಹಾಕಬೇಡಿ. ಡೆಂಗ್ಯೂ ಟೆಸ್ಟಿಂಗ್‌ಗೆ ಚಿಕಿತ್ಸೆಗೆ 10 ಕೋಟಿ ಆಗಬಹುದಾ? ಅದಕ್ಕೆ ಖರ್ಚು ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡಬೇಕು.

ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತೇಕ ವಾರ್ಡ್ ಮಾಡಿಸಿ. ಅಧಿಕಾರಿಗಳು ಎಸಿ ರೂಮ್‌ನಿಂದ ಹೊರಬಂದು ಕೆಲಸ ಮಾಡಬೇಕು. ನಗರದಲ್ಲಿ ಸ್ವಚ್ಛತೆ ಇಲ್ಲದಂತೆ ಆಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಉಚಿತ ಟೆಸ್ಟಿಂಗ್, ಚಿಕಿತ್ಸೆ ಮತ್ತು ಔಷಧವನ್ನ ನೀಡಿ. ಇಲ್ಲೇ 14 ರೋಗಿಗಳಿದ್ದು, 4 ಮಕ್ಕಳಿದ್ದಾರೆ. ಮಕ್ಕಳಿಗೂ ಡೆಂಗ್ಯೂ ಹಬ್ಬುತ್ತಿದೆ. ಇದನ್ನ ಸರ್ಕಾರ ಗಮನಿಸಬೇಕು ಎಂದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !