ಸರಕಾರಿ ಇಲಾಖೆಯ ಸಿಬ್ಬಂದಿಗಳೇ ಕಳ್ಳರ ಟಾರ್ಗೆಟ್; ನಿನ್ನೆ ಪೊಲೀಸ್‌ ಕ್ವಾಟ್ರಸ್, ಇಂದು ಮೆಸ್ಕಾಂ ಕ್ವಾಟ್ರಸ್ ‌ನಲ್ಲಿ ಕಳ್ಳತನ‌!

ಉಡುಪಿ : ನಿನ್ನೆಯಷ್ಟೇ ನಗರದ ಪೊಲೀಸ್ ಕ್ವಾಟ್ರಸ್‌ಗೆ ಕನ್ನ ಹಾಕಿದ್ದ ಕಳ್ಳರು, ಇಂದು ಮೆಸ್ಕಾಂ ಸಿಬ್ಬಂದಿಗಳ ಕ್ವಾಟ್ರಸ್‌ಗೆ ಕನ್ನ ಹಾಕಿದ್ದಾರೆ. ಉಡುಪಿಯ ಕುಂಜಿಬೆಟ್ಟುನಲ್ಲಿರುವ ಮೆಸ್ಕಾಂ ಸಿಬ್ಬಂದಿಯ ವಸತಿಗೃಹದ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ.

ಗಣೇಶ್ ಮತ್ತು ಮುರುಗೇಶ್ ಎಂಬ ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಗೆ ಬೀಗ ಹಾಕಿದ್ದ ಸಂದರ್ಭ ಕಳ್ಳರು ಕೈಚಳಕ ತೋರಿದ್ದಾರೆ. ಆದರೆ ಮನೆಗಳಲ್ಲಿ ಹೆಚ್ಚಿನ ವಸ್ತುಗಳು ಕಳ್ಳರಿಗೆ ಸಿಕ್ಕಿಲ್ಲ. 3 ಮನೆಗಳಿಂದ ಒಟ್ಟಾರೆ 15 ಸಾವಿರ ಮೌಲ್ಯ ಮೂರು ವಾಚ್, ಬೆಳ್ಳಿ ನಾಣ್ಯ ಮಾತ್ರ ಕಳ್ಳತನವಾಗಿದೆ. ಇಲ್ಲಿ ವಾಸವಿದ್ದ ಕೊಂಕಣ ರೈಲ್ವೆ ಜೂನಿಯರ್ ಎಂಜಿನಿಯರ್ ಮನೀಶ್ ಅವರ ಮನೆಗೂ ಕಳ್ಳರು ನುಗ್ಗಿದ್ದಾರೆ. ಮೊನ್ನೆ ರಾತ್ರಿ ಪೊಲೀಸ್ ಕ್ವಾಟ್ರಸ್‌ಗೆ ನುಗ್ಗಿದ್ದ ಕಳ್ಳರ ತಂಡವೇ ಇಲ್ಲೂ ಕಳವು ಮಾಡಿರುವ ಸಾಧ್ಯತೆ ಇದ್ದು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ