ಉಡುಪಿ – ಅಂಗಾರಕಟ್ಟೆ ನಡುವೆ ಸಂಚರಿಸಲು ಸರಕಾರಿ ಬಸ್ ವ್ಯವಸ್ಥೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ

ಉಡುಪಿ : ಉಡುಪಿ – ಅಂಗಾರಕಟ್ಟೆ ನಡುವೆ ಸಂಚರಿಸಲಿರುವ ಸರಕಾರಿ ಬಸ್ಸಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಉಡುಪಿ – ಅಂಗಾರಕಟ್ಟೆ ಮಾರ್ಗವಾಗಿ ಸಂಚರಿಸಲು ಸರಕಾರಿ ಬಸ್ ವ್ಯವಸ್ಥೆ ಮಾಡುವಂತೆ ಸ್ಥಳೀಯ ಶಾಸಕರ ಬಳಿ ಮನವಿ ಮಾಡಿದ್ದರು. ಸ್ಥಳೀಯರ ಮನವಿಯಂತೆ ಸರಕಾರಿ ಬಸ್ ಈ ಮಾರ್ಗದಲ್ಲಿ ಪುನರಾರಂಭಗೊಂಡಿದೆ.

ಈ ಸಂದರ್ಭದಲ್ಲಿ ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ್ ಮಡಿವಾಳ, ಉಪಾಧ್ಯಕ್ಷರಾದ ಇಂದಿರಾ ಪೂಜಾರಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ, ಕೊಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಶೆಟ್ಟಿ, ಅನಿಲ್ ಶೆಟ್ಟಿ, ಆಶಾ ಶೆಟ್ಟಿ, ಸಂದೀಪ್, ಸದಾನಂದ ಪ್ರಭು ಹಾಗೂ ಸ್ಥಳೀಯರಾದ ಹೆನ್ರಿ ಡಿಸೋಜ, ಮೋಹನ್ ನಾಯಕ್, ದಿನೇಶ್ ಕುಲಾಲ್, ರತ್ನಾಕರ್ ನಾಯಕ್, ರಾಜ್ ಕುಮಾರ್, ಅರುಣ್ ಪೆರ್ಣಂಕಿಲ, ರಾಮಕೃಷ್ಣ ನಾಯಕ್, ಕಿರಣ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಜಗದೀಶ್ ಶೆಟ್ಟಿ, ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

Related posts

ಗಾಂಧಿ ಭವನ ಹಸ್ತಾಂತರಿಸದಂತೆ ಆಗ್ರಹ

ಉಡುಪಿ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳೇ ಇಲ್ಲ; ಗಂಟಿಹೊಳೆ ಪ್ರಶ್ನೆಗೆ ಸರ್ಕಾರದ ಉತ್ತರ

ಶೀರೂರು ಮಠದ ಪರ್ಯಾಯ : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ