ಬಸ್‌ನೊಳಗಡೆ ಬಂದು ಯುವಕರ ತಂಡದಿಂದ ಗೂಂಡಾಗಿರಿ ವರ್ತನೆ – ವೀಡಿಯೋ ಸೆರೆ

ಮಂಗಳೂರು : ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದಕ್ಕೆ ತಾಗಿದೆಯೆಂದು ಯುವಕರ ತಂಡವೊಂದು ಅಡ್ಡಗಟ್ಟಿ ಪ್ರಯಾಣಿಕರಿದ್ದ ಬಸ್ಸಿನೊಳಗೆ ಬಂದು ಚಾಲಕ ಹಾಗೂ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ವರ್ತನೆ ತೋರಿದ ಘಟನೆ ವಾಮಂಜೂರಿನಲ್ಲಿ ನಡೆದಿದೆ.

ಮೊಹಮ್ಮದ್ ರಫಿ ಅಫ್ರೀದ್, ಅಕ್ಬರ್, ಜಾಕಿರ್ ಹುಸೇನ್, ಮೊಹಮ್ಮದ್ ಸಾಹಿಲ್, ಮಯತಿ, ಬದ್ರುದ್ದೀನ್ ಎಂಬುವರು ಬಸ್‌ನೊಳಗೆ ಬಂದು ಗೂಂಡಾಗಿರಿ ವರ್ತನೆ ತೋರಿದವರು‌.

ಮಂಗಳೂರು-ಮೂಡುಬಿದಿರೆ ನಡುವೆ ಸಂಚರಿಸುವ ಎಪಿಎಂ ಹೆಸರಿನ ಖಾಸಗಿ ಬಸ್ಸನ್ನು ರವಿವಾರ ಮಧ್ಯಾಹ್ನ 12ಗಂಟೆ ವೇಳೆಗೆ ವಾಮಂಜೂರಿನಲ್ಲಿ ಅಡ್ಡ ಹಾಕಿದ ಮುಸ್ಲಿಂ ಯುವಕರ ತಂಡವೊಂದು ನಿರ್ವಾಹಕ – ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ‌. ಅಲ್ಲದೆ ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ್ದಲ್ಲದೆ, ಚಾಲಕನನ್ನು ಬಸ್ಸಿನಿಂದ ಇಳಿಯುವಂತೆ ಜೋರು ಮಾಡುವ ವಿಡಿಯೋ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಬಸ್‌ ಸಿಬ್ಬಂದಿ ಮತ್ತು ಯುವಕರ ನಡುವೆ ನಡುಬೀದಿಯಲ್ಲಿ ಹೊಯ್ ಕೈ ನಡೆದಿದೆ. ಬಸ್ಸಿನೊಳಗಡೆ ಬಂದು ಗೂಂಡಾಗಿರಿ ವರ್ತಿಸಿದವರು ವಾಮಂಜೂರಿನಲ್ಲಿ‌ ಮೀನು ಮಾರಾಟ ಮಾಡುವ ವ್ಯಾಪಾರಿಗಳು ಎಂದು ತಿಳಿದು ಬಂದಿದೆ.

ರಂಪಾಟ ನಡೆದ ಬೆನ್ನಲ್ಲೇ ಎರಡೂ ತಂಡಗಳ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿಲ್ಲಿಸಿ ಗೂಂಡಾಗಿರಿ ತೋರಿಸಿದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಎರಡೂ ಕಡೆಯವರು ದೂರು ಕೊಡಲು ಒಪ್ಪದೆ ರಾಜಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ಒಪ್ಪಿಕೊಂಡಿದ್ದಾರೆ. ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದು ಮುಚ್ಚಳಿಕೆ ಬರೆಸಿ ಕಳಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 119(4) ಅಡಿ ಪ್ರಕರಣ ದಾಖಲಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ