ದೇವರ ದರ್ಶನಕ್ಕೆ ಬಂದವರ ಚಿನ್ನಾಭರಣ ಕಳವು

ಧರ್ಮಸ್ಥಳ : ಆಂಧ್ರಪ್ರದೇಶದಿಂದ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಬಂದವರ ಚಿನ್ನಾಭರಣ ಕಳವಾಗಿದ್ದು ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಾದ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಾಯಿ ಹೃದಯ ಟೆಂಪಲ್ ಗೋಮತಿ ನಗರದಲ್ಲಿನ ಶ್ರೀ ನಗರ ಕಾಲೋನಿಯ ನಿವಾಸಿ ಜೆ ಲತಾ (47) ಎಂಬವರು ಅಂದ್ರಪ್ರದೇಶದ ನೆಲ್ಲೂರಿನಿಂದ ಒಂದು ಬಾಡಿಗೆ ಇನ್ನೋವಾ ಕಾರಿನಲ್ಲಿ ಹೊರಟು ದಿನಾಂಕ 03-05-2025 ರಂದು ಸಂಜೆ 05-00 ಘಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳಕ್ಕೆ ತಲುಪಿರುತ್ತಾರೆ.

ದೇವರ ದರ್ಶನಕ್ಕೆ ಹೋಗುವ ಮೊದಲು ಕಾರ್ಯಕ್ರಮಕ್ಕೆಂದು ಜೊತೆಯಲ್ಲಿ ತಂದಿದ್ದ ಚಿನ್ನಭರಣಗಳಾದ ಬ್ರಾಸ್‌ಲೆಟ್, ಚಿನ್ನದ ಚೈನ್, ನೆಕ್ಲೇಸ್‌ನ್ನು ವ್ಯಾನಿಟಿ ಬ್ಯಾಗ್‌ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿ ಬ್ಯಾಗ್ ತೆರೆದಿತ್ತು. ಬ್ಯಾಗ್‌ನ ಒಳಗಡೆ ನೋಡಿದಾಗ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಟ್ಟಿದ್ದ 97 ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿದ್ದು, ಒಟ್ಟು ಮೌಲ್ಯ ರೂ 6,79,000/- ಆಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ