ರಾಷ್ಟೀಯ ಮಟ್ಟದ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಉಡುಪಿಯ ಚಿನ್ಮಯ್‍ಗೆ ಸ್ವರ್ಣ ಪದಕ

ಚೆನ್ನೈನ ಅಡ್ಯಾರ್‌ನಲ್ಲಿ ನಡೆದ ರಾಷ್ಟೀಯ ಮಟ್ಟದ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಸಾಸ್ತಾನ, ಗುಂಡ್ಮಿ ಗ್ರಾಮದ ಚಿಗುರು ಪ್ರತಿಭೆ ಚಿನ್ಮಯ್‍ಗೆ ಸ್ವರ್ಣ ಪದಕ ಲಭಿಸಿದೆ.

ಚಂದ್ರ ಪೂಜಾರಿ ಮತ್ತು ಪ್ರೇಮ ಪೂಜಾರಿ ಅವರ ಪುತ್ರನಾದ ಚಿನ್ಮಯ್ ಗುಂಡ್ಮಿ ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ.

13 ವರ್ಷದ ಚಿನ್ಮಯ್, ಈ ಮೂಲಕ ತಮ್ಮ ಶಾಲೆ, ಉಡುಪಿ ಜಿಲ್ಲೆ, ಕರ್ನಾಟಕಕ್ಕೆ ಕೀರ್ತಿ ತಂದಿದ್ದು ಇವರ ಮುಂದಿನ ಕ್ರೀಡಾ ಜೀವನ ಅತ್ಯುತ್ತಮವಾಗಿರಲಿ. ಶೈಕ್ಷಣಿಕ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುವಂತಾಗಲಿ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ