ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬಾಲಕಿಯ ರಕ್ಷಣೆ

ಉಡುಪಿ : ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಬಾಲಕಿಯನ್ನು ರೈಲ್ವೆ ಆರ್‌ಪಿ‌ಆಫ್ ಸುಧೀರ್ ಶೆಟ್ಟಿ, ಅವರು ರಕ್ಷಿಸಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಲ್ಪಟ್ಟ ಬಾಲಕಿಗೆ ನಿಟ್ಟೂರಿನ ಸಖಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲು ನೆರವಾದರು.

ತನಿಕಾಧಿಕಾರಿ ಜಿನಾ ಪಿಂಟೋ ಸಹಕರಿಸಿದರು. ಮಣಿಪಾಲ ಪೋಲಿಸ್ ಠಾಣೆಯ ವಿದ್ಯಾ ಉಪಸ್ಥಿತರಿದ್ದರು. ರಕ್ಷಿಸಲ್ಪಟ್ಟ ಬಾಲಕಿ ಅಪ್ರಾಪ್ತಳಂತೆ ಕಂಡು ಬಂದಿದ್ದು, ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಹೆಸರು ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆ ಅಥವಾ ನಿಟ್ಟೂರು ಸಖಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ