ಉಡುಪಿಯ ಕಂಡೀರಾ… ಹುಲಿವೇಷಧಾರಿಗಳಿಗೆ ನೋಟಿನ ಮಾಲೆಯ ಕಂಡೀರಾ….

ಉಡುಪಿ : ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದೆ. ಈಗಾಗಲೇ ಶ್ರೀ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ ನೆರವೇರಲಿವೆ. ರಥಬೀದಿಯಲ್ಲಿ ಆಗಸ್ಟ್ 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.

ಕೃಷ್ಣ ಪ್ರಸಾದಕ್ಕೆ ಅಗತ್ಯ ಇರುವ ಉಂಡೆ, ಚಕ್ಕುಲಿ ತಯಾರಿಸಲಾಗುತ್ತಿದೆ. ಇನ್ನು ಅಷ್ಠಮಿಯಂದು ಉಡುಪಿಯಲ್ಲಿ ಹುಲಿ ವೇಷಧಾರಿಗಳು ಊರಿನಲ್ಲೆಡೆ ಸಂಚರಿಸಿ ಹುಲಿ ಕುಣಿತ ನಡೆಸುತ್ತಾರೆ. ಕರಾವಳಿಯ ಪ್ರಸಿದ್ಧ ಹುಲಿ ಕುಣಿತಪ್ರಾರಂಭಗೊಳ್ಳುವುದೇ ಅಷ್ಠಮಿಯಂದು. ಅಷ್ಠಮಿಯ ದಿವಸ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಬಳಿಕ ರಥ ಬೀದಿಯಲ್ಲಿ ಮತ್ತು ನಗರದಲ್ಲೆಡೆ ಸಂಚಾರ ಮಾಡಿ ಹುಲಿ ವೇಷಧಾರಿಗಳು ಜನರನ್ನು ರಂಜಿಸುತ್ತಾರೆ‌. ಅಷ್ಟಮಿಯ ದಿವಸ ಶಿರೂರು ಮಠದಲ್ಲಿ ಹುಲಿ ವೇಷಧಾರಿಗಳಿಗೆ ನೋಟಿನ ಮಾಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಈಗಾಗಲೇ ಶಿರೂರು ಮಠದಲ್ಲಿ ಸಾವಿರಾರು ರೂಪಾಯಿಗಳ ನೋಟಿನ ಮಾಲೆ ಸಿದ್ದಗೊಂಡಿದ್ದು ಅಷ್ಟಮಿಯ ದಿವಸ ಇದನ್ನು ಹುಲಿ ವೇಷಧಾರಿಗಳಿಗೆ ಹಂಚಲಾಗುತ್ತದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ