ಗಾಂಜಾ ಸಾಗಾಟ ಪ್ರಕರಣ : ಆರೋಪಿಗಳಿಗೆ ಶಿಕ್ಷೆ

ಸುಳ್ಯ : ಗಾಂಜಾ ಸಾಗಾಟದ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಇಬ್ಬರಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2018ರ ಮಾರ್ಚ್‌ 28ರಂದು ಸುಳ್ಯ ಗಾಂಧಿನಗರ ಶಾಲಾ ಕ್ರಾಸ್‌ ಬಳಿ ಮೋಟಾರು ಸೈಕಲ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿ ಪಿ.ಎಂ. ಮೊಯಿದ್ದೀನ್‌ ಮತ್ತು ಮುರಳಿ ಸಿ. ಅವರನ್ನು ಬಂಧಿಸಿದ್ದರು. ಇವರಿಬ್ಬರ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವರಿಗೆ ಎನ್‌.ಡಿ.ಪಿ.ಎಸ್‌. ಕಾಯ್ದೆಯ ಅಡಿಯಲ್ಲಿ ತಲಾ ರೂ.10,000 ದಂಡ ವಿಧಿಸಲಾಗಿದೆ.

ದಂಡ ತೆರಲು ತಪ್ಪಿದ್ದಲ್ಲಿ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ.ಬಿ ಮೋಹನ್‌ ಬಾಬು ಅವರು ಆದೇಶ ಮಾಡಿರುತ್ತಾರೆ. ಈ ಪ್ರಕರಣವನ್ನು ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ