ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆ : ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ 7‌ರಲ್ಲಿಯೂ ಜಯ ಗಳಿಸಿದ ಎಸ್‌ಡಿ‌ಪಿ‌ಐ ಬೆಂಬಲಿತ ಅಭ್ಯರ್ಥಿಗಳು

ಗಂಗೊಳ್ಳಿ : ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು ಎಸ್‌ಡಿ‌ಪಿ‌ಐ ಬೆಂಬಲಿತ 7 ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ.

ಗಂಗೊಳ್ಳಿ ಗ್ರಾಮ ಪಂಚಾಯತಿಯ ಒಟ್ಟು 33 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ 2ನೇ ಹಾಗೂ 6ನೇ ಕ್ಷೇತ್ರದಲ್ಲಿ ಎಸ್‌ಡಿ‌ಪಿ‌ಐ ಒಟ್ಟು 7 ಜನ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸ್ಪರ್ಧಿಸಿದ ಆ ಏಳೂ ಜನ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

2ನೇ ವಾರ್ಡಿನಲ್ಲಿ ಎಸ್‌ಡಿ‌ಪಿ‌ಐ ಬೆಂಬಲಿತ ಅಭ್ಯರ್ಥಿಗಳಾದ ತಬ್ರೇಜ್ ಗಂಗೊಳ್ಳಿ, ರಜ್ಜಬ್ ಬುಡ್ದಾ, ಅಬೂಬಕರ್ ನಾಖುದಾ ಹಾಗೂ ಶರೀನಾ ಜಯಗಳಿಸಿದರೆ 6ನೇ ವಾರ್ಡಿನಿಂದ ಮೋಮಿನ್ ಸಮೀರ್, ಆಲ್ಬರ್ಟ್ ಫೆರ್ನಾಂಡಿಸ್ ಮತ್ತು ಜಮೀಲಾ ಜಯಗಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ಗಂಗೊಳ್ಳಿ ಪಂಚಾಯತ್‌ನಲ್ಲಿ ಬಿ‌ಜೆ‌ಪಿ ಅಧಿಕಾರದಲ್ಲಿದ್ದು ಈ ಬಾರಿ ಕಾಂಗ್ರೇಸ್ – ಎಸ್‌ಡಿ‌ಪಿ‌ಐ ಮೈತ್ರಿ ಒಟ್ಟು 19 ಸ್ಥಾನಗಳನ್ನು (ಕಾಂಗ್ರೇಸ್ 12 – ಎಸ್‌ಡಿ‌ಪಿ‌ಐ 7) ಪಡೆಯುವ ಮೂಲಕ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !