ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣ : ಮುಸ್ಲಿಂ ಸಂಘಟನೆಯಿಂದ ಪತ್ರಿಕಾಗೋಷ್ಠಿ

ಕಾರ್ಕಳ : ಕಾರ್ಕಳದಲ್ಲಿ ಯುವತಿಯೋರ್ವಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಸಂಘಟನೆಯಿಂದ ಕಾರ್ಕಳದ ಪ್ರಕಾಶ್ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಶರೀಪ್, ಪ್ರಕರಣಕ್ಕೆ ಸಂಬಂದಿಸಿ ಈಗಾಗಲೇ ಆರೋಪಿ ಅಲ್ತಾಫ್ ಬಂಧನವಾಗಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಾಗರೀಕ ಸಮುದಾಯ ಹೊಣೆಗಾರರಲ್ಲ. ಅಲ್ತಾಫ್ ಓರ್ವ ನಾಮಧಾರಿ ಮುಸ್ಲಿಂ, ಜೀವನದಲ್ಲಿ ಯಾವತ್ತೂ ಮಸೀದಿ ಬಾಗಿಲು ನೋಡಿದವನಲ್ಲ. ಪ್ರಕರಣಕ್ಕೆ ಸಂಬಂದಿಸಿ ಹಿಂದೂ ಮುಸ್ಲಿಂ ಎಲ್ಲರೂ ಐಕ್ಯತೆಯಿಂದ ನಿನ್ನೆ ಪೊಲೀಸ್ ಠಾಣೆಯಲ್ಲಿ ಸೇರಿದ್ದೆವು, ಆರೋಪಿ ಅಲ್ತಾಫ್‌ಗೆ ಸೂಕ್ತ ಕಾನೂನಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಕಾರ್ಕಳದಲ್ಲಿ ಹಿಂದೂ ಮುಸ್ಲಿಂ ಬೇದಭಾವವಿಲ್ಲದೆ ಸೌಹಾರ್ದತೆಯ ಜೀವನ ನಡೆಸುತ್ತಿದ್ದೇವೆ. ನಾಮದಾರಿ ಮುಸ್ಲಿಂ‌ನಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಳಂಕವಾಗಿದೆ ಸಮುದಾಯದಿಂದ ಖೇದ ವ್ಯಕ್ತ ಪಡಿಸಿದರು.

ಆರೋಪಿ ಅಲ್ತಾಫ್ ಹಲವಾರು ಕೃತ್ಯಗಳಲ್ಲಿ ಭಾಗಿಯಾದವ. ಹಿಂದೆಯು ಯುವತಿಯ ಕಿಡ್ನಾಪ್ ಮಾಡಿ ಸಾರ್ವಜನಿಕರಿಂದ ಪೆಟ್ಟು ತಿಂದಿದ್ದಾನೆ. ಆರೋಪಿಗಳಿಗೆ ಸೂಕ್ತ ಕಾನೂನಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೇ ಆತನನ್ನು ನಮ್ಮ ಸಮುದಾಯದಿಂದಲೇ ಬಹಿಷ್ಕಾರ ಹಾಕಲಾಗುವುದು ಎಂದರು. ನಮ್ಮ ಸಮುದಾಯದ ಯಾವುದೇ ವಕೀಲರು ಈ ಪ್ರಕರಣದ ಪರವಾಗಿ ವಾದ ಮಾಡಬಾರದು ಎಂದು ಮನವಿ ಮಾಡಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ