“ಗಾಂಧೀಜಿ ಉಡುಪಿ ಭೇಟಿ-90”

ಉಡುಪಿ : ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಉಡುಪಿಯ ರಥಬೀದಿ ಸಾಂಸ್ಕೃತಿಕ ಸಂಘಟನೆ, ಗಾಂಧೀಜಿ ಉಡುಪಿ ಭೇಟಿ -90″ ಎಂಬ ಕಾರ್ಯಕ್ರಮವನ್ನು ಆಯೋಜಿಸಿತು.

ಮಹಾತ್ಮಾ ಗಾಂಧೀಜಿ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ 1933ರಲ್ಲಿ ಹರಿಜನ ಯಾತ್ರೆ ಆರಂಭಿಸಿದ್ದರು. 1934ರಲ್ಲಿ ಉಡುಪಿಗೆ ಗಾಂಧೀಜಿ ಭೇಟಿಕೊಟ್ಟು ಎರಡು ದಿನ ತಂಗಿದ್ದರು. ಗಾಂಧೀಜಿ ಭೇಟಿಗೆ 90 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಂ‌ಜಿ‌ಎಂ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು. ವಿನೀತ ರಾವ್ ಆ ದಿನಗಳನ್ನು ತೆರೆದಿಟ್ಟರು.

ಗಾಂಧೀಜಿ ಭೇಟಿಗೂ ಮುನ್ನ ತಯಾರಿಗಳು, ಭೇಟಿಕೊಟ್ಟ ಸಂದರ್ಭ, ಅಜ್ಜರಕಾಡು ಮೈದಾನದ ಭಾಷಣ, ದೇಣಿಗೆ ಸಂಗ್ರಹ, ಜನರ ಭೇಟಿ ಚರ್ಚೆಯಾದ ವಿಚಾರಗಳ ಬಗ್ಗೆ ಪತ್ರಿಕಾ ವರದಿ, ಅಧ್ಯಯನ, ಸಂದರ್ಶನಗಳ ದಾಖಲೆ ಸಮೇತ ಮಾಹಿತಿ ನೀಡಿದರು. ದಲಿತರಿಗೆ ಪ್ರವೇಶ ಇರದ ಯಾವ ದೇವಸ್ಥಾನಗಳಿಗೂ ಗಾಂಧೀಜಿಯವರು ಯಾತ್ರೆ ಸಂದರ್ಭದಲ್ಲಿ ಭೇಟಿ ಕೊಟ್ಟಿಲ್ಲ ಎಂದರು. ಉಡುಪಿಯಲ್ಲಿ ಅಸ್ಪೃಶ್ಯತೆ ನಿವಾರಣಾ ದೇಣಿಗೆಯಾಗಿ 1200 ರುಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ವಿನೀತ್ ರಾವ್ ಮಾಹಿತಿ ನೀಡಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !