ಫುಟ್ಬಾಲ್‌ ಪಂದ್ಯಾಟದ ವೇಳೆ ಗ್ಯಾಲರಿ ಕುಸಿತ..!

ಮಂಗಳೂರು : ಫುಟ್ಬಾಲ್‌ ಪಂದ್ಯದ ಸಂದರ್ಭದಲ್ಲಿ ಗ್ಯಾಲರಿ ಕುಸಿದು ಬಿದ್ದ ಘಟನೆ ಬೋಳಾರದ ಎಮ್ಮೆಕೆರೆ ಮೈದಾನದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಿಎಸ್‌ಎಲ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವು ಕೆಲವು ದಿನಗಳಿಂದ ನಡೆಯುತ್ತಿದ್ದು. ಶನಿವಾರ ಕೂಡಾ ಪಂದ್ಯ ನಡೆಯುತ್ತಿದ್ದು, ಪ್ರೇಕ್ಷಕರು ತುಂಬಿ ತುಳುಕಿದ್ದರು. ಪೆನಾಲ್ಟಿ ಗೋಲ್‌ ಹೊಡೆಯುವ ಸಂದರ್ಭದಲ್ಲಿ ಪ್ರೇಕ್ಷಕರು ಕುಣಿದಿದ್ದಾರೆ. ಈ ಸಂದರ್ಭದಲ್ಲಿ ಗ್ಯಾಲರಿ ಕುಸಿದಿದೆ. ಸುಮಾರು ನೂರಕ್ಕೂ ಹೆಚ್ಚು ಮಂದಿ ನೆಲಕ್ಕುರುಳಿದರು. ಇಬ್ಬರಿಗೆ ಗಾಯವಾಗಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಎರಡು ಕಾರುಗಳ ನಡುವೆ ಅಪಘಾತ : ನಾಲ್ವರಿಗೆ ಗಾಯ..!

ಸ್ಕೂಟರ್‌ಗೆ ಟೆಂಪೋ ಢಿಕ್ಕಿ; ಚಿಕಿತ್ಸೆ ಫಲಿಸದೇ ಸ್ಕೂಟರ್ ಸವಾರೆ ಮೃತ್ಯು…!