ಮರವಂತೆ ಕಡಲಲ್ಲಿ ಮೋಜು ಮಸ್ತಿ; ಅಪಾಯ ಆಹ್ವಾನಿಸುತ್ತಿರುವ ಪ್ರವಾಸಿಗರು!

ಮರವಂತೆ : ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಸತತ ಮಳೆಗೆ ಮರವಂತೆ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ ಕೊರೆತವೂ ಕಾಣಿಸಿಕೊಂಡಿದೆ. ಮರವಂತೆ ಬೀಚ್ ವಿಶ್ವಪ್ರಸಿದ್ಧಿಯನ್ನು ಹೊಂದಿದ್ದು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಜನರು ಇದರ ಸೌಂದರ್ವವನ್ನು ಆಸ್ವಾದಿಸದೇ ಮುಂದಕ್ಕೆ ಸಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಮರವಂತೆ ಬೀಚ್‌ನ ಎದುರಲ್ಲೇ ನದಿ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಮುದ್ರ ಮತ್ತು ನದಿ ಬೇರ್ಪಡಿಸುತ್ತದೆ. ಇದರಿಂದಾಗಿ ಈ ಬೀಚ್ ಪ್ರಸಿದ್ಧಿ ಪಡೆದಿದೆ.

ಆದರೆ ಪ್ರವಾಸಿಗರು ಮೋಜು ಮಸ್ತಿ ನೆಪದಲ್ಲಿ ಇಲ್ಲಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಬೀಚ್‌ನ ಕಲ್ಲು ಬಂಡೆಗಳ ಮೇಲೆ ಹತ್ತಿ ಸೆಲ್ಫೀ ಕ್ಲಿಕ್ಕಿಸುವುದು, ಸಮುದ್ರಕ್ಜೆ ಇಳಿದು ಅಲೆಗಳ ಜೊತೆ ಆಟ ಆಡುವುದನ್ನು ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸುವ ಅಗತ್ಯ ಇದೆ. ಹಲವು ಭಾಗಗಳಲ್ಲಿ ಜನರು ಮೋಜು ಮಸ್ತಿ ನೆಪದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇಲ್ಲೂ ಅದು ಪುನರಾವರ್ತನೆ ಆಗದಂತೆ ತಡೆಯಬೇಕಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ