ಜು. 22ರಿಂದ ಎಐ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅಬುಧಾಬಿಗೆ ದಿನಂಪ್ರತಿ ಸಂಚಾರ

ಮಂಗಳೂರು : ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆ‌ಯನ್ನು ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಧರಿಸಿದ್ದು, ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ವಿಮಾನ‌ಗಳು ಜುಲೈ 22ರಿಂದ ಪ್ರತೀ ದಿನ ಕಾರ್ಯಾಚರಿಸಲಿವೆ.

ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 1 ವಿಮಾನ ಸೇರಿ ನಿತ್ಯ 5 ವಿಮಾನಗಳು ಬೆಂಗಳೂರು – ಮಂಗಳೂರು ನಡುವೆ ಕಾರ್ಯಾಚರಿಸುತ್ತಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ 2‌ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿಸುತ್ತಿದೆ. ಇದು ಜು.22ರಿಂದ ಲಭ್ಯವಾಗಲಿದ್ದು, ಇದು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿ‌ಸಲಿದ್ದು, ಈ ವಿಮಾನ ಮಂಗಳೂರಿಗೆ ಬಂದು ಅಬುಧಾಬಿಗೆ ಪ್ರಯಾಣಿಸಲಿದೆ.

ಬೆಂಗಳೂರಿಗೆ ಇನ್ನಷ್ಟು ವಿಮಾನ

ಆಗಸ್ಟ್ 1ರಿಂದ ಬೆಂಗಳೂರು- ಮಂಗಳೂರು ಸೆಕ್ಟರ್ನಲ್ಲಿ ವಾರದಲ್ಲಿ ಮೂರು ದಿನ (ಸೋಮ, ಬುಧ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಇನ್ನೊಂದು ವಿಮಾನ ಸೇವೆ ಆರಂಭಿಸಲಿದೆ. ಮುಂಬಯಿ-ಮಂಗಳೂರು ಸೆಕ್ಟರ್‌ನಲ್ಲಿಯೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಧ್ಯಾಹ್ನದ ಅನಂತರದ ವಿಮಾನವನ್ನು 1600 ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ