ಜೋಳ ನೀಡುವುದಾಗಿ 11.5 ಲಕ್ಷ ರೂ. ವಂಚನೆ : ದೂರು ದಾಖಲು

ಕುಂದಾಪುರ : ಜೋಳ ಖರೀದಿಗೆ ಹಣ ನೀಡಿದರೂ 55 ಮೆ.ಟನ್‌ ಜೋಳ ನೀಡದೆ 11.5 ಲಕ್ಷ ರೂ. ವಂಚಿಸಿದ ಕುರಿತು ಆರೀಶ್‌ ಓವರ್‌ಸೀಸ್‌ ಇಂಪೆನ್ಸ್‌ ಎಂಬ ಹೆಸರಿನ ಟ್ರೇಡಿಂಗ್‌ ಆ್ಯಂಡ್‌ ಮರ್ಚಂಟ್‌ ಎಕ್ಸ್‌ಪೋರ್ಟ್‌ ವ್ಯವಹಾರದ ಸತೀಶ್ಚಂದ್ರ ಬಳ್ಕೂರು ದೂರು ನೀಡಿದ್ದಾರೆ.

ಅವರಿಗೆ ಕಂಡೋಬ ಎಂಟರ್‌ಪ್ರೈಸೆಸ್‌ನ ಮಾಲಕ ಮೋಹನ ಕುಮಾರ್‌ ಅವರು ಜೋಳ ಬೇಕೆಂದು ಹೇಳಿದ್ದು, ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಶಾಸ್ತ್ರೀ ಮೊಹಲ್ಲಾ ತಾಲೂಕಿನ ಮಾರುತಿ ಮಂದಿರದ ಹತ್ತಿರದ ದೀಪಿಕಾ ಟ್ರೇಡಿಂಗ್‌ ಕಂಪೆನಿಯ ಮಾಲಕ ದೀಪಕ್‌ ದಗದುಬಾ ಬೋಸ್ಲೆ ಜೋಳ ನೀಡಲು ಒಪ್ಪಿದ್ದ. ಅದರಂತೆ ಮಹಾರಾಷ್ಟ್ರದ ಚಿಕಲಿ ಎಂಬಲ್ಲಿಗೆ ಹೋಗಿ ಜೋಳ ನೋಡಿ 55 ಮೆಟ್ರಿಕ್‌ ಟನ್‌ ಜೋಳ ಖರೀದಿಸಲು 12.43 ಲಕ್ಷ ರೂ.ಹಾಗೂ ಸಾಗಾಟಕ್ಕೆ 62 ಸಾ.ರೂ. ಸೇರಿ ಒಟ್ಟು 13.05 ಲಕ್ಷ ರೂ. ನೀಡಲು ತಿಳಿಸಿದ್ದರು.

ಜೋಳದ ಬಾಬ್ತು 12,43,000 ರೂ. ದೀಪಕ್‌ ಖಾತೆಗೆ ಹಾಗೂ ದೀಪಕ್‌ ಸೂಚಿಸಿದ್ದ ಮಹಾರಾಷ್ಟ್ರದ ಟ್ರಿನಿಟಿ ರೋಡ್‌ ಕ್ಯಾರಿಯರ್ಸ್‌ ಟ್ರಾನ್ಸ್‌ ಪೋರ್ಟ್‌ ಕಂಪೆನಿಗೆ 62 ಸಾ. ರೂ. ಜಮೆ ಮಾಡಲಾಗಿತ್ತು. ಬಳಿಕ ಜೋಳ ನೀಡದ ಕಾರಣ ದೀಪಕ್‌ 1.50 ಲಕ್ಷ ರೂ. ವಾಪಸ್‌ ನೀಡಿದ್ದು, ಉಳಿದ 11.55 ಲಕ್ಷ ರೂ. ಅನ್ನು ಈವರೆಗೂ ನೀಡಿಲ್ಲ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು