ನಕಲಿ ವೀಸಾ ನೀಡಿ ಲಕ್ಷಾಂತರ ರೂ ವಂಚನೆ

ಕುಂದಾಪುರ : ಲಕ್ಷಾಂತರ ರೂ. ಹಣ ಪಡೆದು ನಕಲಿ ವೀಸಾ ನೀಡಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಮ್ಮಾಡಿ ಗ್ರಾಮದ ಜೋಸೆಫ್ ಡಿಸೋಜ ಎಂಬವರ ಮಗ ಪ್ರಜ್ವಲ್‌ ಡಿಸೋಜ ವಿದೇಶದಲ್ಲಿ ಉದ್ಯೋಗಕ್ಕೆ ಹೋಗುವ ನಿಟ್ಟಿನಲ್ಲಿ ರಾಬರ್ಟ್ ವಿಲ್ಸನ್ ಎಂಬವರನ್ನು ಸಂಪರ್ಕಿಸಿ ವೀಸಾ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದರು. ಆ ಸಮಯ ರಾಜೇಶ್ ಎಂಬಾತನು ವೀಸಾ ಮಾಡಿಸಿ ಕೊಡುವುದಾಗಿ ಹೇಳಿದ್ದನು. ಅದರಂತೆ ವೀಸಾ ಮಾಡಿಸಿ ಕೊಡಲು ಅನಿತಾ ಎಂಬಾಕೆಗೆ ಜೋಸೇಫ್ ಒಟ್ಟು 1,17,000ರೂ. ಹಣ ಪಾವತಿಸಿದ್ದರು.

ನಂತರ ಆರೋಪಿಗಳು ವಿಸಿಟಿಂಗ್ ವೀಸಾವನ್ನು ಕಳುಹಿಸಿದ್ದು, ಆ ವೀಸಾ ಪಡೆದು ಪ್ರಜ್ವಲ್ ಡಿಸೋಜ ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅಲ್ಲಿ ಅಧಿಕಾರಿಗಳು ವೀಸಾವನ್ನು ಪರಿಶೀಲಿಸಿದಾಗ ನಕಲಿ ವೀಸಾ ಎಂದು ಪರಿಗಣಿಸಿ ಪ್ರಜ್ವಲ್‌ನನ್ನು ವಾಪಾಸ್ಸು ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ