ಟೋಲ್ ವಿನಾಯಿತಿಗೆ ನಕಲಿ ಆರ್.ಸಿ. ಸೃಷ್ಟಿಸಿ ವಂಚನೆ ಪ್ರಕರಣ‌ : ಆರೋಪಿಗೆ ಮಧ್ಯಂತರ ಜಾಮೀನು

ಉಡುಪಿ : ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಕಲಿ ಆರ್.ಸಿ. ತಯಾರಿಸಿ ತೋರಿಸಿ ವಂಚಿಸಿ ಸುಂಕ ವಿನಾಯಿತಿಗೆ ಯತ್ನಿಸಿದ ಹಿನ್ನೆಲೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಆರೋಪಿ ಮಯ್ಯಾದಿ ಅಹ್ಮದ್ ಸಾಹೇಬ್ ಎಂಬುವವರು ತಮ್ಮ ಬಲೆನೋ ಕಾರಿನ ಆರ್.ಸಿ.ಯನ್ನು ತಿರುಚಿ ಕೋಟ ಪಡುಕರೆ ನಿವಾಸಿ ಎಂಬಂತೆ ದಾಖಲೆ ಸೃಷ್ಟಿಸಿದ್ದು, ಅ.16ರಂದು ಆರೋಪಿಯು ಟೋಲ್‌ಗೇಟ್ ಪಾಸ್‌ಮಾಡುವ ಸಂದರ್ಭ ಆರ್.ಸಿ.ಯಲ್ಲಿ ತಿರುಚಿರುವುದು ಕಂಡುಬಂದಿದ್ದು, ಅನುಮಾನಗೊಂಡ‌ ಸಾಸ್ತಾನ ಟೋಲ್‌ಗೇಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೇಶ್ ಸರಕಾರದ ಅಧಿಕೃತ ಜಾಲತಾಣ ಪರಿವಾಹನ್‌ನಲ್ಲಿ ಪರಿಶೀಲಿಸಿದಾಗ ವಾಹನದ ಸಂಖ್ಯೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ವಿಳಾಸದಲ್ಲಿ ರಿಜಿಸ್ಟರ್ ಆಗಿರುವುದು ಕಂಡುಬಂದಿದೆ. ಹೆಜಮಾಡಿ ಟೋಲ್‌ಗೇ‌ಟ್‌ನ‌ಲ್ಲಿಯೂ ಪರಿಶೀಲಿಸಿದಾಗ ಅಲ್ಲಿಯೂ ಕೂಡ ಸ್ಥಳೀಯ ವಿಳಾಸದಲ್ಲಿ ನಕಲಿ ಆರ್.ಸಿ. ಸಿದ್ದಪಡಿಸಿರುವುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಕೋಟ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದ್ದು ನ್ಯಾಯಾಲಯವು ಪ್ರಕರಣವು ಪ್ರಾಥಮಿಕವಾಗಿ ಸ್ಥಾಪಿತವಾಗಿಲ್ಲವೆಂದು ಪರಿಗಣಿಸಿ ಆರೋಪಿಗೆ ಮಧ್ಯಂತರ ಜಾಮೀನು ಆದೇಶಿಸಿರುತ್ತದೆ. ಆರೋಪಿಯ ಪರವಾಗಿ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿಯವರು ವಾದಿಸಿರುತ್ತಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು