ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ – ಮುಂಜಾಗ್ರತೆಗೆ ಸೂಚನೆ

ಉಡುಪಿ : ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅಧಿಕಾರಿ ಹಾಗೂ ಸಿಬಂದಿಗಳ ಹೆಸರಿನಲ್ಲಿ ಅನಧಿಕೃತವಾಗಿ ಉದ್ದಿಮೆ ಪರವಾನಿಗೆ, ಪ್ಲಾಸ್ಟಿಕ್‌ ರೈಡ್‌ಗಳನ್ನು ನಡೆಸಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ಕಂಡುಬಂದಿವೆ.

ಈ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಸಲುವಾಗಿ ನಗರಸಭೆಯ ಅಧಿಕಾರಿಗಳು, ಸಿಬಂದಿ ಗುರುತಿನ ಚೀಟಿಯೊಂದಿಗೆ ಬಂದಲ್ಲಿ ಮಾತ್ರ ಯಾವುದೇ ಉದ್ದಿಮೆ ಪರವಾನಿಗೆ ಸಮೀಕ್ಷೆ, ಪ್ಲಾಸ್ಟಿಕ್‌ ಕಾರ್ಯಾಚರಣೆಗೆ ಅಂಗಡಿ ಮಾಲಕರು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಯಾವುದೇ ವ್ಯಕ್ತಿಗಳು ನಗರಸಭೆಯ ಹೆಸರಿನಲ್ಲಿ ವಂಚಿಸಿದಲ್ಲಿ ಅದಕ್ಕೆ ನಗರಸಭೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!