ಗಮನ ಬೇರೆಡೆ ಸೆಳೆದು ಎಟಿಎಂನಿಂದ ಹಣ ಡ್ರಾ ಮಾಡಿ ವಂಚನೆ

ಉಡುಪಿ : ಎಟಿಎಂ ಕಾರ್ಡ್‌ ಮೂಲಕ ಹಣ ತೆಗೆಯಲು ಹೋಗಿದ್ದ ಗ್ರಾಹಕರೊಬ್ಬರಿಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುವ ನೆಪದಲ್ಲಿ ಬ್ಯಾಂಕ್‌ ವಿವರ ಪಡೆದು ಲಕ್ಷಾಂತರ ರೂ. ಹಣ ದೋಚಿದ ಘಟನೆ ಸಂಭವಿಸಿದೆ.

ಕೆಳಾರ್ಕಳಬೆಟ್ಟುವಿನ ಜಗದೀಶ ರಾವ್‌ ಅವರು ಸಂತೆಕಟ್ಟೆಯಲ್ಲಿರುವ ಎಸ್‌‌ಬಿಐ ಬ್ಯಾಂಕ್‌ ಎಟಿಎಂನಿಂದ ಅವರ ಕೆನರಾ ಬ್ಯಾಂಕ್‌ ಸೇವಿಂಗ್‌ ಖಾತೆಯಿಂದ 10,000 ರೂ. ತೆಗೆದಿದ್ದರು. ಅನಂತರ ಖಾತೆಯ ಸ್ಟೇಟ್‌ಮೆಂಟ್‌ ತೆಗೆಯುತ್ತಿರುವಾಗ ಅವರ ಹಿಂದಿದ್ದ ಓರ್ವ ವ್ಯಕ್ತಿ ಸಹಾಯ ಮಾಡುವಂತೆ ನಟಿಸಿ ಅವರ ಎಟಿಎಂ ಕಾರ್ಡ್‌ ಪಡೆದು ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾನೆ.

ಜಗದೀಶ್‌ ಅವರು ಮನೆಗೆ ಬಂದಾಗ ಅವರ ಕೆನರಾ ಬ್ಯಾಂಕ್‌ ಖಾತೆಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ ಹಂತ-ಹಂತವಾಗಿ 2,29,998 ರೂ.ಗಳು ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಕೂಡಲೇ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 32,192 ರೂ.ಮಾತ್ರ ಇತ್ತು. ಅಪರಿಚಿತ ವ್ಯಕ್ತಿಯು ಜಗದೀಶ್‌ ಅವರ ಗಮನಕ್ಕೆ ಬಾರದೇ ಅವರ ಬ್ಯಾಂಕ್‌ ಖಾತೆಯಿಂದ ಒಟ್ಟು 2,40,000 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು