ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿದಾರನಾಗಿ ವಂಚನೆ – ಆರೋಪಿ ಅಂದರ್

ಮಂಗಳೂರು : ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆ.ಉಮ್ಮರಬ್ಬ ಮೊಯ್ದೀನ್ ಬಂಧಿತ ಆರೋಪಿ.

ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅದರಂತೆ ಅಪರಾಧ ಕ್ರಮಾಂಕ: 141/2023 ಐಪಿಸಿ ಕಲಂ 464, 465, 466, 468, 471, 474ರಂತೆ ಆರೋಪಿ ಕೆ. ಉಮ್ಮರಬ್ಬ ಮೊಯ್ದೀನ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Related posts

ಬಸ್ಸು ಮಾಲಕರಿಂದ ಟೋಲ್ ಲೂಟಿ ವಿರುದ್ಧ ಪ್ರತಿಭಟನೆ

ಫೆಬ್ರವರಿ 8ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ ₹ 25ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ : ಯಶ್ಪಾಲ್ ಸುವರ್ಣ

ಫೆ.8ರಂದು “ಸ್ವರಸಾನಿಧ್ಯ” ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ