ಮಾಹೆಯ ಹೆಬ್ಬಾರ್‌ ಗ್ಯಾಲರಿ ಆ್ಯಂಡ್‌ ಆರ್ಟ್ಸ್‌ ಸೆಂಟರ್‌ನಲ್ಲಿ ರಾಜಸ್ತಾನಿ ಕಲಾವಿದರ ಜಾನಪದ ಸಂಗೀತ ಕಾರ್ಯಕ್ರಮ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈ‌ಯರ್‌ ಎಜುಕೇಶನ್‌ [ಮಾಹೆ]ನ ಹೆಬ್ಬಾರ್‌ ಆರ್ಟ್‌ ಗ್ಯಾಲರಿ ಆ್ಯಂಡ್‌ ಆರ್ಟ್‌ ಸೆಂಟರ್‌ [ಎಚ್‌ಜಿಎಸಿ] ಯು ಜೋಧ್‌ಪುರದ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದು ಆಗಸ್ಟ್‌ 23, 2024 ರಂದು ಮಣಿಪಾಲ್‌ ಸೆಂಟರ್‌ ಫಾರ್‌ ಹ್ಯುಮಾನಿಟೀಸ್‌ನ ಗಂಗೂಬಾಯಿ ಹಾನಗಲ್‌ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ಸಿಂಧಿ ಸಾರಂಗಿ, ಧೋಲಕ್‌, ಮೋರ್ಚಿಂಗ್‌ ಮತ್ತು ಖರ್ತಾಲ್‌- ಹೀಗೆ ನಾಲ್ಕು ದೇಸಿ ವಾದ್ಯಗಳನ್ನು ಒಳಗೊಂಡಿದೆ. ಈ ನಾಲ್ಕು ವಾದ್ಯಗಳು ರಾಜಸ್ತಾನ ಮತ್ತು ಉತ್ತರಭಾರತದ ಸಾಂಪ್ರದಾಯಿಕ ಜಾನಪದ ಮತ್ತು ಭಕ್ತಿ ಸಂಗೀತಗಳಲ್ಲಿ ಬಳಕೆಯಾಗುತ್ತವೆ.

ಈ ಸಂಗೀತ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಯಾನ್ವಯ ಆಸನ ಸೌಲಭ್ಯವಿದೆ. ಸಂಜೆ 6.15 ದ ಬಳಿಕ ಸಭಾಂಗಣಕ್ಕೆ ಪ್ರವೇಶವಿಲ್ಲ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು