ಮಂಗಳೂರು : ಯುಕೆಯ ಆಧಾರಿತ ಎಡ್ಟೆಕ್ ಕಂಪನಿ ಫ್ಲೋಥರ್ಮೋಲ್ಯಾಬ್, ಯುರೋಪ್, ಭಾರತ, ಅಮೆರಿಕಾ, ಹಾಗೂ middle east ದೇಶದ ಏರೋಸ್ಪೇಸ್ ಹಾಗೂ ಆಟೋಮೊಬೈಲ್ ಕಂಪೆನಿಗಳಿಗೆ CFD ಕನ್ಸಲ್ಟೆನ್ಸಿ ಸೇವೆಗಳನ್ನು ನೀಡುವುದರಲ್ಲಿ ಪರಿಣತಿ ಹೊಂದಿದ್ದು, ಏರೋಸ್ಪೇಸ್ ಮತ್ತು ಮೆಕಾನಿಕಲ್ ಇಂಜಿನಿಯರ್‌ಗಳಿಗೆ ಆನ್‌ಲೈನ್ ಮೂಲಕ CFD ನಂತಹ ಉನ್ನತ ಕೋರ್ಸ್‌ಗಳನ್ನು ನೀಡುತ್ತದೆ. ಇದು ಈಗ ಮಂಗಳೂರು ನಗರದಲ್ಲಿ ಹೊಸ ಕಚೇರಿಯನ್ನು ಆರಂಭಿಸಿದೆ. ನಗರದ ಕಾಪಿಕಾಡಿನಲ್ಲಿ ಇರುವ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿರುವ ಈ ಕಚೇರಿಯನ್ನು 2024ರ ನವೆಂಬರ್ 4ರಂದು, ಸೋಮವಾರ ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭವನ್ನು ನಿವೃತ್ತ ಸೈನಿಕ ಅಧಿಕಾರಿಯು ಮತ್ತು ಫ್ಲೋಥರ್ಮೋಲ್ಯಾಬ್ ನಿರ್ದೇಶಕರಾದ ಶ್ರೀ ಪ್ರದೀಪ್ ಕುಮಾರ್ ಕೆ.ವಿ. ಅವರು ನೆರವೇರಿಸಿದರು. ಸಮಾರಂಭದಲ್ಲಿ ಫ್ಲೋಥರ್ಮೋಲ್ಯಾಬ್ ಸಂಸ್ಥಾಪಕರಾದ ಡಾ. ಸಂದೀಪ್ ಮೌವನಾಲ್, ಎಮ್‌ಜಿಎಮ್ ರಿಯಾಲ್ಟಿಯ ಸಹ-ಸಂಸ್ಥಾಪಕರಾದ ಗುರುದತ್ ಶೆಣೈ, ವರ್ಟೆಕ್ಸ್ ವರ್ಕ್‌ಸ್ಪೇಸ್‌ನ ಮಾರಾಟ ಮತ್ತು ಮಾರುಕಟ್ಟೆ ಮುಖ್ಯಸ್ಥರಾದ ಸುಭಾಷ್ ನಾಯಕ್, ವಿವೇಕ್ ಕುಂಜಿತ್ತಾಯ, ರಾಹುಲ್, ಮಿಧುನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಈ ಸಮಾರಂಭವು ಫ್ಲೋಥರ್ಮೋಲ್ಯಾಬ್‌ನ ವಿಸ್ತರಣೆಯನ್ನು ಆಚರಿಸಿದ್ದು, ಏರೋಸ್ಪೇಸ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಸೇವೆಗಳನ್ನು ಮತ್ತು ಕನ್ಸಲ್ಟೆನ್ಸಿ ಸೇವೆಗಳನ್ನು ನೀಡುವಲ್ಲಿ ದೊಡ್ಡ ಮೈಲಿಗಲ್ಲಾಗಿ ಗುರುತಿಸಲ್ಪಟ್ಟಿತು.
ಫ್ಲೋಥರ್ಮೋಲ್ಯಾಬ್‌ನ ಹೊಸ ಕಚೇರಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ ಸಂಪರ್ಕವನ್ನು ಹೆಚ್ಚು ಬಲಗೊಳಿಸುವ ನಿರೀಕ್ಷೆಯಿದ್ದು, ಆಧುನಿಕ ಉದ್ಯಮದ ಜ್ಞಾನವನ್ನು ಜಾಗತಿಕ ಶಿಕ್ಷಣ ಪ್ರವೇಶಕ್ಕೆ ಸೇತುವೆಯನ್ನಾಗಿ ಮಾಡುವ ದೃಷ್ಟಿಕೋನವನ್ನು ಮತ್ತಷ್ಟು ಬೆಂಬಲಿಸುತ್ತದೆ.