ಮೀನುಗಾರಿಕಾ ದೋಣಿ ಪಲ್ಟಿ : ನಾಲ್ವರ ಮೀನುಗಾರರ ರಕ್ಷಣೆ

ಕಾರವಾರ : ಮೀನುಗಾರಿಕಾ ದೋಣಿ ಪಲ್ಟಿಯಾಗಿ ಮುಳುಗಡೆಯಾಗುತ್ತಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಗಂಗೆಕೊಳ್ಳದಲ್ಲಿ ನಡೆದಿದೆ.

ಗೋಕರ್ಣ ಸಮುದ್ರ ವ್ಯಾಪ್ತಿಯಲ್ಲಿ ನಾಲ್ವರು ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆಗಾಗಿ ತೆರಳಿದ್ದರು. ಸಮದ್ರದಲ್ಲಿ ಹಠಾತ್ತಾಗಿ ಬೀಸಿದ ಪ್ರಬಲ ಗಾಳಿ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿಯಾಗಿ ನಾಲ್ವರು ಮುಳುಗಡೆಯಾಗುತ್ತಿದ್ದರು.

ಈ ವೇಳೆ ಅಲ್ಲೆ ಹತ್ತಿರದಲ್ಲಿ ಬರುತ್ತಿದ್ದ ಮಂಗಳೂರು ಮೂಲದ ಒಸಿಯನ್ ಬ್ಲೂ ಹೆಸರಿನ ಬೋಟ್‌ನಲ್ಲಿದ್ದ ಮೀನುಗಾರರು ಜೀವರಕ್ಷಕ ಸಾಧನಗಳಾದ ರಬ್ಬರ್ ಟೂಬ್ ಎಸೆದು ಮಳುಗಡೆಯಾಗುತ್ತಿದ್ದ ಮೀನುಗಾರರನ್ನ ರಕ್ಷಣೆ ಮಾಡಿದ್ದಾರೆ.

Related posts

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ

ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವು