ಮಾಹೆಯಲ್ಲಿ ಪ್ರಥಮಬಾರಿಗೆ ಆನ್‌ಲೈನ್‌ ಶಿಕ್ಷಣದ ಘಾನಾದ ಹಳೆವಿದ್ಯಾರ್ಥಿಗಳ ಸಭೆ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]‌ಯು ಆಫ್ರಿಕಾ ಖಂಡದಲ್ಲಿರುವ ಆಕ್ರ ಘಾನಾ [Accra Ghana] ದ ಆನ್‌ಲೈನ್‌ ಶಿಕ್ಷಣದ ವಿದ್ಯಾರ್ಥಿಗಳ ಸಮಾವೇಶವನ್ನು ಪ್ರಥಮಬಾರಿಗೆ ಆಗಸ್ಟ್‌ 13, 2024ರಂದು ಆಯೋಜಿಸಿತ್ತು. ವಿದೇಶಾಂಗ ಸಚಿವಾಲಯ, ಭಾರತ ಸರ್ಕಾರದ ಇ-ವಿದ್ಯಾಭಾರತಿ, ಇ-ಆರೋಗ್ಯಭಾರತಿ [ಇವಿಬಿಎಬಿ], ಪ್ಯಾನ್‌ ಆಫ್ರಿಕನ್‌ ನೆಟ್‌ವರ್ಕ್‌ ಪ್ರಾಜೆಕ್ಟ್‌ ಮೊದಲಾದವುಗಳಿಂದ ಶಿಷ್ಯವೇತನ ಪಡೆದಿರುವ ಸುಮಾರು 20 ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಮಾಹೆಯ ಆನ್‌ಲೈನ್‌ ಶಿಕ್ಷಣದ ಜೊತೆಗಿನ ತಮ್ಮ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.

ಹಳೆವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡೈರೆಕ್ಟೊರೇಟ್‌ ಆಫ್‌ ಆನ್‌ಲೈನ್‌ ಎಜುಕೇಶನ್‌ನ ನಿರ್ದೇಶಕ ಡಾ. ಮನೋಜ್‌ ಕುಮಾರ್‌ ನಾಗಸಂಪಿಗೆ ಅವರು, ಆಫ್ರಿಕಾದ ವಿದ್ಯಾರ್ಥಿಗಳ ಮೇಲೆ ಮಾಹೆಯ ಆನ್‌ಲೈನ್‌ ಶಿಕ್ಷಣ ವಿಭಾಗದ ಕಾರ್ಯಕ್ರಮಗಳು ವೃತ್ತಿಪರ ಪ್ರಗತಿಗೆ ಕಾರಣವಾಗಿರುವುದನ್ನು ಉಲ್ಲೇಖಿಸಿದರು. ‘ಮಾಹೆಯ ಆಲ್‌ಲೈನ್‌ ಶಿಕ್ಷಣದಿಂದ ಆಫ್ರಿಕಾದ ವಿದ್ಯಾರ್ಥಿಗಳು ಉದ್ಯೋಗವಕಾಶವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ’ ಎಂಬುದನ್ನು ಒತ್ತಿ ಹೇಳಿದರು.
ಮಾಹೆಯ ಹೆಮ್ಮೆಯ ಹಳೆವಿದ್ಯಾರ್ಥಿಯಾಗಿರುವ ಡೇನಿಯಲ್‌ ಅಬೋಟ್ಸಿ ಮಾಹೆಯ ಆನ್‌ ಲೈನ್‌ ಶಿಕ್ಷಣದ ಯಶಸ್ವಿ ಕತೆಗಳನ್ನು ಹಂಚಿಕೊಂಡರು. ಮಾಹೆಯ ಆನ್‌ಲೈನ್‌ ಶಿಕ್ಷಣದಲ್ಲಿ ಪದವಿ ಪಡೆದವರು ಉತ್ತಮ ಉದ್ಯೋಗಗಳನ್ನು ಗಳಿಸಲು ಸಾಧ್ಯವಾಗಿರುವುದಲ್ಲದೆ, ಈಗಾಗಲೇ ಉದ್ಯೋಗದಲ್ಲಿರುವವರು ಉನ್ನತ ಭಡ್ತಿಯ ಸೌಲಭ್ಯವನ್ನು ಹೊಂದುವುದಕ್ಕೂ ಪೂರಕವಾಗಿದೆ’ ಎಂದರು. ಆನ್‌ಲೈನ್‌ ಶಿಕ್ಷಣ ವಿಭಾಗದ ಮೂಲಕ ಎಂಬಿಎ ಪದವಿಯನ್ನು ಪಡೆಯುವ ಸೌಲಭ್ಯವನ್ನು ಕಲ್ಪಿಸಿರುವುದಕ್ಕೆ ನಾವು ಮಾಹೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ‘ ಎಂದರು.

ಪ್ರಸ್ತುತ ಹಳೆವಿದ್ಯಾರ್ಥಿಗಳ ಸಮಾವೇಶವು ಮಾಹೆ ಮತ್ತು ಆಫ್ರಿಕಾದ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಬೆಳೆಸುವಲ್ಲಿ ಹೊಸ ಅಧ್ಯಾಯವನ್ನು ತೆರೆದಿರುವುದಲ್ಲದೆ, ಗಡಿಯಾಚೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮಾಹೆಯ ಬದ್ಧತೆಯ ಪ್ರತೀಕವಾಗಿದೆ. ಆಡಳಿತ ಮತ್ತು ದತ್ತ ವಿಜ್ಞಾನ [ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಡಾಟಾ ಸಾಯನ್ಸ್‌]ನಲ್ಲಿ ಆನ್‌ ಲೈನ್‌ ಶಿಕ್ಷಣ ಪಡೆಯುತ್ತಿರುವವರಿಗೆ ಮಾಹೆಯು ಶಿಷ್ಯವೇತನದ ಸೌಲಭ್ಯವನ್ನು ನೀಡುತ್ತಿದೆ. ಮಾಹೆಯ ಆನ್‌ಲೈನ್‌ ಶಿಕ್ಷಣ ವಿಭಾಗದಲ್ಲಿ ಪ್ರಸ್ತುತ 36 ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿರುವುದು ಗಮನಾರ್ಹವಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !