ಬೆಂಕಿ ಆಕಸ್ಮಿಕ – ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವು

ಬ್ರಹ್ಮಾವರ : ಆರೂರು ಗ್ರಾಮದ ಬಂಗ್ಲಗುಡ್ಡೆ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಆರೂರು ಗ್ರಾಮದ ಗಿರಿಜಾ(70) ಎಂದು ಗುರುತಿಸಲಾಗಿದೆ. ಇವರು ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತಿರುವಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಒಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ