ಸೆಝ್ ಕೈಗಾರಿಕಾ ವಲಯದಲ್ಲಿ ಬೆಂಕಿ‌ ಅವಘಡ – ಕೋಟ್ಯಾಂತರ ನಷ್ಟ

ಮಂಗಳೂರು : ಸೆಝ್ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಅಥೆಂಟಿಕ್ ಓಷನ್ ಟ್ರೆಷರ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ರವಿವಾರ ಮಧ್ಯಾಹ್ನ ಸಂಭವಿಸಿದೆ.

ಕಂಪೆನಿಯಲ್ಲಿ ದುರಸ್ತಿ ಕಾರ್ಯನಡೆಯುತ್ತ ಕಾರಣ ನೌಕರರು ಯಾರು ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಥೆಂಟಿಕ್ ಓಷನ್ ಟ್ರೆಷರ್‌ನ ಮೂಲವೊಂದು ಮಾಹಿತಿ ನೀಡಿದೆ.

ಕಂಪೆನಿಯ ಕೋಲ್ಡ್ ಸ್ಟೋರ್ ಸೆಕ್ಷನ್ ಮತ್ತು ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಸುಮಾರು 10 ಕೋ.ರೂ. ಮೌಲ್ಯದ ಮತ್ಸ್ಯ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

ಸದ್ಯ ಕೈಗಾರಿಕಾ ವಲಯ ಎಂಆರ್‌‌ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿದು ಬಂದಿದೆ.

ಅಥೆಂಟಿಕ್ ಓಷನ್ ಟ್ರೆಷರ್ ಕಂಪೆನಿಯು ಮೀನುಗಳನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ತಂದು ಅದನ್ನು 10 ಕೆ.ಜಿ. ಯ ಪ್ಯಾಕೇಟ್‌ಗಳನ್ನು ಮಾಡಿ ವಿದೇಶಗಳಿಗೆ ತಫ್ತು ಮಾಡುವ ಕಂಪೆನಿಯಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ