ಕುಂದಾಪುರದ ತ್ರಾಸಿಯಲ್ಲಿ ಬೆಂಕಿ ಅವಘಡ : ರಿಪೇರಿಗಾಗಿ ನಿಲ್ಲಿಸಿದ್ದ ವಾಹನಗಳು ಸುಟ್ಟು ಭಸ್ಮ…!

ಕುಂದಾಪುರ : ಕುರುಚಲು ಗಿಡಗಳಿರುವ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಲ್ಲೇ ಸಮೀಪದಲ್ಲಿ ರಿಪೇರಿ‌ಗಾಗಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿರುವ ಘಟನೆ ರವಿವಾರ ಸಂಜೆ ತ್ರಾಸಿ ಜಂಕ್ಷನ್ ಬಳಿ ನಡೆದಿದೆ.

ಕುರುಚಲು ಗಿಡಗಳಿಗೆ ಬೆಂಕಿ ತಗುಲಿ ಹೊತ್ತಿಕೊಂಡಿದ್ದು, ಬಳಿಕ ಬೆಂಕಿಯು ಅಲ್ಲೇ ಸಮೀಪ ರಿಪೇರಿಗಾಗಿ ನಿಲ್ಲಿಸಿದ ವಾಹನ‌ಗಳಿಗೂ ತಗಲಿತು. ಇದರಿಂದ ಈ ವಾಹನಗಳು ಬೆಂಕಿಯಿಂದ ಹಾನಿಯಾಗಿವೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ವಾಹನಗಳ ಸಹಿತ ಸಿಬ್ಬಂದಿ ಬೆಂಕಿ ನಂದಿಸಿದರು. ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯಲಾಯಿತು.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ