ಗರುಡ ಗ್ಯಾಂಗ್‌ಗೆ ಹಣಕಾಸಿನ ನೆರವು : ಯುವತಿ ಅರೆಸ್ಟ್

ಉಡುಪಿ : ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಆಪ್ತ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಎಂದು ಗುರುತಿಸಲಾಗಿದೆ.

ಗರುಡ ಗ್ಯಾಂಗ್‌ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್‌ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಸಫಾರ ಯಾನೆ ಸಾಜಿದ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಸದ್ಯ ಸಫಾರ ಯಾನೆ ಸಾಜಿದರವರನ್ನು ಬಂಧಿಸಿ ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ