ಸಿಒಡಿಪಿ ಸಮಾಜ ಸೇವಾ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು

ಮಂಗಳೂರು : ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಶ್ರೀಮಾನ್ ಮೈಕಲ್ ಡಿ ಸೋಜ ಮತ್ತು ಕುಟುಂಬದವರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ವಂ.ಪೀಟರ್ ಪೌಲ್ ಸಲ್ಡಾನ್ಹ ವಹಿಸಿ, ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸಿ ಈ ಕಾರ್ಯಕ್ರಮಕ್ಕೆ ಶುಭ ನುಡಿದರು.

ಶ್ರೀಮಾನ್ ಮೈಕಲ್ ಡಿ‌ಸೋಜ‌ರವರು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಸಮಾಜದಲ್ಲಿ ಉತ್ತಮ ನಡವಳಿಕೆ ಮತ್ತು ಶಿಕ್ಷಣ ಪಡೆದು, ತಮ್ಮ ಮಾತೃಭಾಷೆಗೆ ಪ್ರಾಮುಖ್ಯತೆ ಕೊಡಬೇಕು ಹಾಗೂ ಹಿರಿಯರು ನಮಗೆ ಮಾಡಿದ ಸಹಾಯವನ್ನು ಎಂದಿಗೂ ಮರೆಯಬಾರದು. ವಿದ್ಯಾಭ್ಯಾಸ ಮುಗಿದ ನಂತರ, ಹೆತ್ತವರನ್ನು ಚೆನ್ನಾಗಿ ನೋಡುವ ಜವಬ್ದಾರಿ ವಹಿಸಿ ಮತ್ತು ತಮ್ಮಿಂದ ಬಡವರಿಗೆ ಸಹಾಯ ಮಾಡುವ ಆಸಕ್ತಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಫ್ಲಾವಿಯ ಡಿ‌ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜ ಮತ್ತು ಸಹ ನಿರ್ದೇಶಕ ವಂದನೀಯ ಫಾ| ಲೊರೆನ್ಸ್ ಕುಟಿನ್ಹಾ ರವರು ಹಾಜರಿದ್ದರು.

ಸಿಒಡಿಪಿ ನಿರ್ದೇಶಕರಾದ ರೆ.ಫಾ. ವಿನ್ಸೆಂಟ್ ಡಿ ಸೋಜ ಶಿಕ್ಷಣ ನಿಧಿಯ ಪ್ರತಿಷ್ಠಾಪಕ ಧಾನಿಗಳಾದ ಶ್ರೀಮಾನ್ ಮೈಕಲ್ ಡಿ‌ಸೋಜ ಮತ್ತು ಶ್ರೀಮತಿ ಫ್ಲಾವಿಯ ಡಿಸೋಜ ರವರ ಪರಿಚಯ ನೀಡಿದರು. ಬಿಷಪ್‌ರವರು ಅವರಿಗೆ ಗೌರವ ಅರ್ಪಣೆ ಸಲ್ಲಿಸಿದರು.

ಕುಟುಂಬದ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ 103 ವಿದ್ಯಾರ್ಥಿಗಳಿಗೆ ರೂ. 86,60,000/- ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗುವುದು.

ವಂದನೀಯ ಫಾ| ಲೊರೆನ್ಸ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಾರ್ಪಣೆಗೈದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ