ಚಿತ್ರನಟ ದರ್ಶನ್ ಬಂಧಮುಕ್ತಿಗಾಗಿ ಪತ್ನಿಯಿಂದ ಕೊಲ್ಲೂರಿನಲ್ಲಿ ಪ್ರಾರ್ಥನೆ; ಚಂಡಿಕಾಯಾಗದಲ್ಲಿ ಭಾಗಿ

ಕೊಲ್ಲೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಶಕ್ತಿ ಕೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಚಿತ್ರನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ತಮ್ಮ ಆಪ್ತರ ಜೊತೆ ಗುರುವಾರ ಸಂಜೆ ಇಲ್ಲಿಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ಇಂದು ಬೆಳಿಗ್ಗೆ ನವ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.

ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ-ಸಂಕಲ್ಪ ಮಾಡಿರುವ ವಿಜಯಲಕ್ಷ್ಮಿ ರಾತ್ರಿ ಕೊಲ್ಲೂರಿನಲ್ಲಿಯೇ ವಾಸ್ತವ್ಯ ಹೂಡಿ ಮುಂಜಾನೆ ನವಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಅರ್ಚಕರಾದ ನರಸಿಂಹ ಅಡಿಗ ನೇತೃತ್ವದಲ್ಲಿ ಚಂಡಿಕಾಯಾಗ ನಡೆಯಿತು. ಅರ್ಚಕ ಸುಬ್ರಹ್ಮಣ್ಯ ಅಡಿಗ ಚಂಡಿಕಾಯಾಗಕ್ಕೆ ಸಂಕಲ್ಪ ಮಾಡಿಸಿದರು. ತಮ್ಮ ಪತಿ ಸಂಕಷ್ಟಗಳಿಂದ ಪಾರಾಗಿ ಶೀಘ್ರ ಹೊರಬರುವಂತಾಗಲಿ ಎಂದು ಪತ್ನಿ ಈ ವೇಳೆ ದೇವಿಯ ಬಳಿ ಬೇಡಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿರುವುದರಿಂದ ಪತ್ನಿ ವಿಜಯಲಕ್ಷ್ಮಿ ಅವರ ಕೊಲ್ಲೂರು ಭೇಟಿ ಮಹತ್ವ ಪಡೆದಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ