ಅಜ್ಜರಕಾಡು ಸರಕಾರಿ ಜಿಮ್‌ನಲ್ಲಿ ಹೊಡೆದಾಟ : ದೂರು-ಪ್ರತಿದೂರು ದಾಖಲು

ಉಡುಪಿ : ಅಜ್ಜರಕಾಡು ಸರಕಾರಿ ಜಿಮ್‌ನಲ್ಲಿ ಹೊಡೆದಾಟ ನಡೆದಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಉದ್ಯಾವರ ಪ್ರದೀಪ್‌ ಸ್ಯಾಮುವೆಲ್‌ ಎಂದಿನಂತೆ ಡಿ.31ರಂದು ಬೆಳಗ್ಗೆ ಜಿಮ್‌ಗೆ ತೆರಳಿದ್ದು, ವಾಪಸ್‌ ಬರುವಾಗ ಅದೇ ಜಿಮ್‌ನ ಸದಸ್ಯ ಲಕ್ಷೀತ್‌ ಎಂಬಾತ ‘ನಿಮ್ಮನ್ನು ಜಿಮ್‌ ಟ್ರೈನರ್‌ ಉಮೇಶ್‌ ಕರೆಯುತ್ತಿದ್ದಾರೆ’ ಎಂದು ಹೇಳಿದ್ದ. ಅದರಂತೆ ಪ್ರದೀಪ್‌ ಅವರು ಉಮೇಶ್‌ ಬಳಿಗೆ ಹೋಗಿ ವಿಚಾರಿಸಿದಾಗ ಅವರು ‘ನಾನು ನಿಮ್ಮನ್ನು ಕರೆದಿಲ್ಲ’ ಎಂದರು. ಅನಂತರ ಪುನಃ ಲಕ್ಷೀತ್‌ನಲ್ಲಿ ಈ ಬಗ್ಗೆ ಕೇಳಲು ಹೋದಾಗ, ಆತ ಏಕಾಏಕಿ ಜಿಮ್‌ ಸಲಕರಣೆಯಿಂದ ಪ್ರದೀಪ್‌ ತಲೆಗೆ ಹೊಡೆದಿದ್ದಾನೆ ಎಂದು ಒಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಡವೂರಿನ ಲಕ್ಷೀತ್‌ ನೀಡಿದ ಪ್ರತಿದೂರಿನಲ್ಲಿ, ತಾನು ಡಿ.31ರಂದು ಅಜ್ಜರಕಾಡು ಜಿಮ್‌ನ ಕೊಠಡಿಯ ಒಳಗೆ ಹೋದಾಗ ಪ್ರದೀಪ್‌ ಸ್ಯಾಮುವೆಲ್‌ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ಅನಂತರ ಜಿಮ್‌ನಲ್ಲಿದ್ದ ರಾಡ್‌ನಿಂದ ಹಲ್ಲೆಗೆ ಮುಂದಾದ. ಪೆಟ್ಟನ್ನು ತಡೆಯುವ ಪ್ರಯತ್ನದಲ್ಲಿ ಬಲಕೈಗೆ ಏಟಾಗಿದೆ. ಈ ವೇಳೆ ಪ್ರದೀಪ್‌ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಪ್ರತಿ ದೂರು ನೀಡಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ