ರ್‍ಯಾಂಕ್ ವಿಜೇತೆ ಸುದೀಕ್ಷಾ ಶೆಟ್ಟಿ ಮನೆಗೆ ಭೇಟಿ ಕೊಟ್ಟು ಶುಭ ಹಾರೈಸಿದ ಜೊತೆ ಆಟಗಾರರು

ಕಾರ್ಕಳ : ರಾಜ್ಯಕ್ಕೆ ಐದನೇ ಮತ್ತು ಉಡುಪಿಗೆ ಪ್ರಥಮ ರ್‍ಯಾಂಕ್ ಪಡೆದ ಕಾರ್ಕಳದ ಜೋಡುರಸ್ತೆ ನಿವಾಸಿ ದೀಕ್ಷಾ ಮನೆಗೆ ಅವರು ಆಟವಾಡುತ್ತಿದ್ದ ಮೈದಾನದ ಸಹ ಆಟಗಾರರು ಭೇಟಿ ನೀಡಿ ಶುಭ ಹಾರೈಸಿದರು.

ದೀಕ್ಷಾ ವಾಲಿಬಾಲ್ ಆಟಗಾರ್ತಿಯಾಗಿ ತಮ್ಮ ಕಾಲೇಜು ತಂಡವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಜೊತೆ ಆಟಗಾರ್ತಿಯರು ಮನೆಗೆ ಭೇಟಿ ನೀಡಿ ಸಾಧನೆಗೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಚ್ ಸಂತೋಷ್ ಡಿಸಿಲ್ವಾ, ಪುರಸಭಾ ಸದಸ್ಯ ಶುಭದರಾವ್, ಜೀವನ್, ವೆಂಕಟೇಶ್, ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ