ಉದ್ಯಾವರ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ಕಳವಿಗೆ ವಿಫಲ ಯತ್ನ – ಇಬ್ಬರು ಆರೋಪಿಗಳ ಬಂಧನ

ಉಡುಪಿ : ಉಡುಪಿ ಸಮೀಪದ ಉದ್ಯಾವರದ ಕೆನರಾ ಬ್ಯಾಂಕಿನ ಎಟಿಎಂನಿಂದ ಹಣ ಕಳವು ಮಾಡಲು ವಿಫಲ ಯತ್ನ ನಡೆಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜನಾಡಿಯ ಅಬೂಬಕ್ಕರ್‌ಸಿದ್ದಿಕ್ (24) ಮತ್ತು ಪಡೀಲ್‌ನ ಮೊಹಮ್ಮದ್ ಯಾಸೀನ್(21) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರು ಫೆಬ್ರವರಿ 12ರಂದು ಉದ್ಯಾವರದಲ್ಲಿ ಕೆನರಾ ಬ್ಯಾಂಕಿನ ಎಟಿಎಂನ ಹಣ ದೋಚಲು ವಿಫಲ ಯತ್ನ ನಡೆಸಿದ್ದರು. ಆರೋಪಿಗಳ ಚಲನವಲನದ ಸಿಸಿಟಿವಿಯ ದೃಶ್ಯ ಆಧರಿಸಿ ಕಾಪು ಪೊಲೀಸರು ಇಬ್ಬರನ್ನು ಮಂಗಳೂರಿನ ಬಂದರಿನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ