ಸಿಬಿಐ ಅಧಿಕಾರಿ ಸೋಗಿನಲ್ಲಿ ಬೆದರಿಸಿ ಬರೋಬ್ಬರಿ 68ಲಕ್ಷ ಸುಲಿಗೆ – ಮೂವರು ಖತರ್ನಾಕ್ ವಂಚಕರು ಅರೆಸ್ಟ್

ಮಂಗಳೂರು : ಸಿಬಿಐ ಅಧಿಕಾರಿಯೆಂದು ಬೆದರಿಸಿ ಬರೋಬ್ಬರಿ 68ಲಕ್ಷ ರೂ. ಹಣ ಸುಲಿಗೆ ಮಾಡಿರುವ ಕೇರಳ ಮೂಲದ ಮೂವರು ಖತರ್ನಾಕ್ ವಂಚಕರನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾ ತಾಲೂಕು ನಿವಾಸಿ ನಿಸಾರ್, ಕೋಝಿಕೋಡ್, ತಿರುವನ್ನೂರು ನಿವಾಸಿ ಸಾಹಿಲ್, ಮಪ್ಪಿಲಾ ಕೋಯಿಲಾಂಡಿ ನಿವಾಸಿ ಮುಹಮ್ಮದ್ ನಶಾತ್ ಬಂಧಿತ ಆರೋಪಿಗಳು.

ಆರೋಪಿಗಳು ಸಿಬಿಐ ಅಧಿಕಾರಿ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಲಾಗುತ್ತದೆ ಎಂದು ಹೆದರಿಸಿ ಸುಮಾರು 68 ಲಕ್ಷ ರೂ. ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಅದರಂತೆ ಆರೋಪಿ ಪತ್ತೆಗೆಂದು ಕೇರಳದ ಕೊಚ್ಚಿಯಲ್ಲಿದ್ದ ಆರೋಪಿ ನಿಸಾರ್‌ನನ್ನು ಕಾವೂರು ಠಾಣಾ ಪೊಲೀಸರು ಅಕ್ಟೋಬರ್ 15ರಂದು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಾದ ಸಾಹಿಲ್ ಮತ್ತು ಮುಹಮ್ಮದ್ ನಶಾತ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಸುಮಾರು 90 ಲಕ್ಷದಷ್ಟು ಹಣ ವಂಚನೆ ಮಾಡಿದ್ದರು. ಈ ಬಗ್ಗೆ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯ ಅಕ್ರ 147/2024 ಕಲಂ 66(ಸಿ),66(ಡಿ) ಐಟಿ ಕಾಯ್ದೆ 318(4),3(5) ಬಿಎನ್.ಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಅದರಂತೆ ಆರೋಪಿ ಪತ್ತೆಗೆಂದು ಕೇರಳದ ಕೋಝಿಕೋಡ್‌ಗೆ ತೆರಳಿದ ಕಾವೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ