ಮೂಡಾ ಹಗರಣದ ವಿಚಾರಣೆ ಬಳಿಕ ಹಾಲು ಯಾವುದು ನೀರು ಯಾವುದೆಂದು ಗೊತ್ತಾಗುತ್ತದೆ – ಬಿ.ಕೆ.ಹರಿಪ್ರಸಾದ್

ಮಂಗಳೂರು : ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ, ಜೆಡಿಎಸ್‌ನವರಿಗೆ ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹಗರಣದ ಬಗ್ಗೆ ಸಿಎಂ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆಗೆ ಆದೇಶಿಸಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು ನೀರು ಯಾವುದೆಂದು ಗೊತ್ತಾಗುತ್ತದೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ

ಹಗರಣ ಆಗಿದೆಯೋ ಗೊತ್ತಿಲ್ಲ ಆದರೆ ಆಪಾದನೆ ಮಾಡಿದ್ದಾರೆ. ಸಿಬಿಐ, ಇಡಿ ಎಲ್ಲವೂ ವಿಚಾರಣೆಗೆ ಮುಂದೆ ಬಂದಿದೆ.‌ ಅಂತಿಮ ನಿರ್ಣಯ ಬಂದ ಬಳಿಕ ಯಾರು ಎಲ್ಲಿದ್ದಾರೆಂದು ಗೊತ್ತಾಗುತ್ತದೆ. ರಾಜ್ಯಸರ್ಕಾರಕ್ಕೆ ಮಸಿ ಬಳಿಯಬೇಕೆಂದು ನಿರಂತರ ಪ್ರಯತ್ನವಾಗುತ್ತಿದೆ ಎಂದರು.

2ಜಿ, 3ಜಿ, 10ವರ್ಷವಾಯ್ತು. ಆ ಮಹಾನುಭಾವ ವಿಶ್ವಗುರು ಯಾರನ್ನಾದರೂ ಜೈಲಿಗೆ ಕಳಿಸಿದ್ರಾ..?. ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಸುಳ್ಳು ಬಹಳ ದಿವಸ ಇರೋದಿಲ್ಲ. ಕರ್ನಾಟಕದಲ್ಲಿ ಆಗಿರುವ ಘಟನೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೈಕಮಾಂಡ್ ಮುಖ್ಯಮಂತ್ರಿ, ಕೆ.ಪಿ.ಸಿ.ಸಿ ಅಧ್ಯಕ್ಷರನ್ನು ಕರೆಯೋದು ಸಂಪ್ರದಾಯ.‌ ಯಾವ ವಿಚಾರ ಮಾತನಾಡ್ತಾರೆಂದು ನೋಡಬೇಕಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು ವಿಚಾರವಾಗಿ ಮಾತನಾಡಿದ ಅವರು, ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಗಳಿಗೆ ತಾಳಮದ್ದಳೆ ಮಾಡೋದಕ್ಕೆ ಇರೋದು. ನೀತಿ‌ ಆಯೋಗ ಸರಿಯಿದ್ದರೆ ಬಜೆಟ್‌ನಲ್ಲಿ ಅತೀ ಹೆಚ್ಚು ತೆರಿಗೆ ನೀಡಿ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು.‌ ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ.‌ ನಾವು ಬೇರೆಯವರಿಗೆ ಕೊಡಬೇಡಿ ಅನ್ನುವುದಿಲ್ಲ.‌ ನಮ್ಮ ಶೇರ್ ನಮಗೆ ಕೊಡಿ ಎಂದು ಕೇಳಿದ್ರೆ ಕೊಟ್ಟಿಲ್ಲ. ಅದಕ್ಕೆ ನಾವು ನೀತಿ ಆಯೋಗವನ್ನು ಬಾಯ್ಕಾಟ್ ಮಾಡಿದ್ದೇವೆ ಎಂದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar